ಕಾರವಾರ: ಈತನಿಗೆ ಕೋಳಿ ಕದ್ದು ತಿನ್ನೋದು ಅಂದ್ರೆ ಬಲು ಇಷ್ಟ. ಹಾಗಾಗಿ ಊರಿನಲ್ಲಿರೋ ಮನೆಗಳ ಕೋಳಿ ಗೂಡಿಗೆ ಬಾಯಿ ಹಾಕಿ ದಿನಕ್ಕೆ ನಾಲ್ಕೈದು ಕೋಳಿ ತಿಂದು ನೆಮ್ಮದಿಯಿಂದ ಕಾಡು ಸೇರುತ್ತಿದ್ದ. ಅಂತೂ ಗೂಡಿಂದ ಕೋಳಿ ಕದ್ದು ಓಡಿ ಹೋಗುತಿದ್ದ ಕೋಳಿ ಕಳ್ಳ ಕೂನೆಗೂ ಸಿಕ್ಕಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟ್ಟಿಕೇರಿ ಎಂಬ ಗ್ರಾಮದ ಈಶ್ವರ್ ನಾಯ್ಕ ಎಂಬುವರ ಮನೆಯಲ್ಲಿ 10 ಅಡಿ ಉದ್ದದ 125 ಕೆಜಿ ತೂಕದ ಹೆಬ್ಬಾವೊಂದು ಮನೆಯಲ್ಲಿರೋ ಕೋಳಿ ಗೂಡಿನಲ್ಲಿ ಸೇರಿಕೊಂಡು ಕೋಳಿಗಳನ್ನ ತಿನ್ನುತ್ತಿತ್ತು.
Advertisement
Advertisement
ಇದರ ಉಪಟಳದಿಂದಾಗಿ ಕೋಳಿ ಮಾಲೀಕರಿಗೆ ತಲೆನೋವಾಗಿತ್ತು. ಇಂದು ಗೂಡಿಗೆ ನುಗ್ಗಿ ಬರೋಬ್ಬರಿ ಮೂರು ಕೋಳಿ ನುಂಗಿದ್ದ ಹೆಬ್ಬಾವು ಕೊನೆಗೂ ಮನೆಯ ಯಜಮಾನನ ಕೈಗೆ ಸಿಕ್ಕಿಬಿದ್ದಿದೆ. ಈ ಹೆಬ್ಬಾವನ್ನ ಉರುಗ ತಜ್ಞರಾದ ಸ್ನೇಕ್ ಮಹೇಶ್ ಅವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
Advertisement
Advertisement