ಮನುಷ್ಯನ ದೇಹದಲ್ಲಿ ತುಂಬಾ ಮುಖ್ಯವಾದ ಭಾಗ ಅಂದ್ರೆ ಹೃದಯ. ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಆರೋಗ್ಯವಾಗಿರಬೇಕು ಅಂತಾ ಹಲವಾರು ಬಗೆಯ ವ್ಯಾಯಾಮ ಮಾಡ್ತೀವಿ, ಡಯಟ್ ಕೂಡ ಮಾಡ್ತೀವಿ. ಆದ್ರೆ ಹೃದಯಕ್ಕೆ ಬೇಕಾದ ಆರೋಗ್ಯಕರ ಆಹಾರಗಳು ಯಾವುದು? ಅಂತಾ ತುಂಬಾ ಜನರಿಗೆ ಗೊತ್ತಿರಲ್ಲ. ನಿಮ್ಮ ನಿತ್ಯದ ಆಹಾರದಲ್ಲಿ ಯಾವ ಯಾವ ಆಹಾರವನ್ನು ಸೇವಿಸಿದರೇ ಹೃದಯಕ್ಕೆ ಒಳ್ಳೆದು ಎಂಬ ಪಟ್ಟಿ ಇಲ್ಲಿದೆ.
ಹೌದು, ನಾವು ಹೇಳುವ ಕೆಲವು ಆಹಾರವನ್ನು ನೀವು ಪ್ರತಿನಿತ್ಯವು ಸೇವೆಸುವುದರಿಂದ ಹಲವು ಹೃದಯ ಸಂಬಂಧಿತ ರೋಗಗಳಿಂದ ಪಾರಾಗಬಹುದು. ಹೃದಯದ ಆರೋಗ್ಯ ಕಾಪಾಡಲು ಹಲವು ಬಗೆ ಬಗೆಯ ತರಾಕಾರಿ, ಹಣ್ಣುಗಳು ಹಾಗೂ ಆಹಾರಗಳು ಇದೆ. ಅವುಗಳು ಯಾವುದು ಅನ್ನೋ ಕಂಪ್ಲೀಟ್ ವಿವರ ಇಲ್ಲಿದೆ.
Advertisement
ಹೃದಯಕ್ಕೆ ಅವಶ್ಯವಾದ 10 ಆಹಾರಗಳು ಯಾವುದು?
Advertisement
1. ಓಮೇಘಾ- 3ಎಸ್ ಗುಣವುಳ್ಳ ಮೀನುಗಳು ಅಂದರೆ ಸಾಲ್ಮನ್, ಟುನಾ, ಮ್ಯಕ್ರೇಲ್, ಹೆರ್ರಿಂಗ್ ಮತ್ತು ಟ್ರಾಟ್ ಪ್ರಜಾತಿಯ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ಹೃದಯಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ.
Advertisement
2. ಬಾದಾಮಿ, ವಾಲ್‍ನಟ್‍ಗಳಂತಹ ಒಣ ಬೀಜಗಳನ್ನು ಸೇವಿಸುವುದರಿಂದ ಬೇಗ ನಿಮ್ಮ ಹೊಟ್ಟೆ ತುಂಬುತ್ತದೆ ಹಾಗೂ ದೇಹಕ್ಕೂ ಒಳ್ಳೆಯದು. ಇದರಿಂದ ನೀವು ಕೊಲೆಸ್ಟ್ರಾಲ್ ಇರುವ ತಿನಿಸುಗಳನ್ನು ತಿನ್ನುವುದು ಕಡಿಮೆಯಾಗುತ್ತದೆ. ಹೀಗೆ ಮಾಡಿದರೇ ಅಪಾಯಕಾರಿ ಕೊಲೆಸ್ಟ್ರಾಲ್ ಹೃದಯಕ್ಕೆ ಸೇರುವುದಿಲ್ಲ.
Advertisement
3. ಸ್ಟ್ರಾಬೆರಿ, ಬ್ಲೂಬೆರಿ, ಕ್ಯಾನ್‍ಬೆರಿ ಅಥವಾ ರಸ್‍ಬೆರಿ ಅಂತಹ ಹಣ್ಣುಗಳನ್ನು ಮೊಸರು ಅಥವಾ ಧಾನ್ಯಗಳೊಡನೆ ಸೇವಿಸುವುದರಿಂದ ಹೃದಯಕ್ಕೆ ಬೇಕಾದ ಫೈಟೋನ್ಯೂಟ್ರಿಯಂಟ್‍ಗಳು ಹಾಗೂ ಫೈಬರ್ ದೊರೆಯುತ್ತದೆ.
4. ಅಗಸೆ ಬೀಜದಲ್ಲಿ (ಫ್ಲಾಕ್ಸ್ ಸೀಡ್) ಓಮೇಘಾ-3 ಕೊಬ್ಬಿನಾಮ್ಲಗಳ ಅಂಶವಿರುತ್ತದೆ. ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ನೇರವಾಗಿ ತಿನ್ನುವುದರಿಂದ ದೇಹಕ್ಕೆ ಪೋಷಕಾಂಶ ದೊರೆಯುತ್ತದೆ. ಅಲ್ಲದೆ ರಕ್ತದ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಿಡಿತದಲ್ಲಿಡುತ್ತದೆ.
5. ಓಟ್ ಮೀಲ್ ನಲ್ಲಿ ಪೋಷಕಾಂಶದ ಆಗರವೇ ತುಂಬಿರುತ್ತದೆ. ಇದನ್ನು ದಿನ ನಿತ್ಯದ ಆಹಾದಲ್ಲಿ ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
6. ಕೆಂಪು ಅಲಸಂದೆ ಕಾಳು ಅಥವಾ ಕಿಡ್ನಿಬೀನ್ಸ್ ಗಳಂತಹ ಧಾನ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್-ಬಿ ಹಾಗೂ ಮಿನರಲ್ಸ್ ಸಿಗುತ್ತದೆ.
7. ದಿನವು ಕಾಲು ಕಪ್ ಕೆಂಪು ವೈನ್ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಸರಿಯಾಗಿರುತ್ತದೆ. ಇದರಿಂದ ಹೃದಯಾಘಾತದಿಂದ ಕೊಂಚ ದೂರವಿರಬಹುದು.
8. ಕಿತ್ತಳೆ ಹಣ್ಣು, ಪಪಾಯ ಹಣ್ಣುಗಳಲ್ಲಿ ಬೇಟಾ- ಕ್ಯಾರೊಟಿನ್, ಪೊಟಾಷಿಂ, ಮ್ಯಾಗ್‍ನೀಷಿಯಂ ತರಹದ ಫೈಬರ್‍ಗಳು ದೊರೆಯುತ್ತದೆ. ಇದರಿಂದ ಹೃದಯಕ್ಕೆ ಉತ್ತಮ ಪೌಷ್ಠಿಕಾಂಶ ಸಿಗುತ್ತದೆ.
9. ಟೊಮಾಟೊ ಅಲ್ಲಿ ವಿಟಮಿನ್-ಸಿ ಮತ್ತು ಎ, ಆಲ್ಫಾ ಮತ್ತು ಬೇಟಾ ಕ್ಯಾರೊಟಿನ್ ಹಾಗೂ ಲೈಕೋಪೆನ್ ಅಂಶವಿರುತ್ತದೆ. ಇದನ್ನು ತಿನ್ನುವುದರಿಂದ ಹೃದಯದಲ್ಲಿ ಕೊಲೆಸ್ಟ್ರಾಲ್ ಹಾಗೂ ರಕ್ತದ ಒತ್ತಡವನ್ನು ಇದು ನಿಯಂತ್ರಿಸುತ್ತದೆ.
10. ಡಾರ್ಕ್ ಚಾಕೋಲೇಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೋಕೋ ಅಂಶವಿರುತ್ತದೆ. ಡಾರ್ಕ್ ಚಾಕೋಲೇಟ್ ನನ್ನು ಸೇವಿಸುವುದರಿಂದ ಹೃದಯದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತದೆ.
ನೋಡಿದ್ರಲ್ಲ ಯಾವ ಯಾವ ಆಹಾರಗಳನ್ನು ಸೇವಿಸಿದರೇ ಹೃದಯದ ಆರೋಗ್ಯಕ್ಕೆ ಒಳ್ಳೇದು ಅಂತಾ. ನೀವು ನಿಮ್ಮ ದಿನನಿತ್ಯ ಡಯಟ್‍ನಲ್ಲಿ ಈ ಆಹಾರವನ್ನು ಸೇವಿಸಿದ್ದೇ ಆದರೇ ನಿಮ್ಮ ಹೃದಯದ ಆರೋಗ್ಯವನ್ನು ಉತ್ತಮಗೊಳಿಸಿಕೊಂಡು ಆರೋಗ್ಯಕರ ಬದುಕು ನಿಮ್ಮದಾಗಿಸಿಕೊಳ್ಳಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews