ಮಂಗಳೂರು: ಕಾಡಿನಿಂದ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಮರಳಿ ಕಾಡಿಗಟ್ಟಿದ ಪ್ರಸಂಗ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.
ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶಕ್ಕೆ ಬರುತ್ತವೆ. ಭಾರೀ ವಿಷಯುಕ್ತ ಆಗಿರುವ ಈ ಹಾವುಗಳನ್ನು ಕಂಡ ಕೂಡಲೇ ಜನ ಹೆದರುತ್ತಾರೆ. ಆದರೆ ಮಿತ್ತಬಾಗಿಲು ಗ್ರಾಮದ ಪುನ್ಕೆದಡಿ ಎಂಬಲ್ಲಿ ಕಾಳಿಂಗವನ್ನು ಕಂಡ ಕೂಡಲೇ ಸ್ಥಳೀಯರು ಲಾಯ್ಲದ ಹಾವು ಹಿಡಿಯುವ ಸ್ನೇಕ್ ಅಶೋಕ್ ಅವರನ್ನು ಕರೆಸಿದ್ದಾರೆ.
Advertisement
ವಿಷ ಉಗುಳುತ್ತಿದ್ದ ಕಾಳಿಂಗನನ್ನು ಚಾಣಾಕ್ಷ ರೀತಿಯಲ್ಲಿ ಹಿಡಿದು ಅರಣ್ಯಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ. ಸ್ನೇಕ್ ಅಶೋಕ್ ಈ ಹಿಂದೆ 20ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಹೀಗಾಗಿ ಇಲ್ಲಿ ಕಂಡು ಬಂದ ಹತ್ತು ಅಡಿ ಉದ್ದದ ಕಾಳಿಂಗನ ಹಿಡಿಯುವುದು ಕಷ್ಟವಾಗಲಿಲ್ಲ. ಕಾಳಿಂಗ ಘಟ ಸರ್ಪಗಳ ಪೈಕಿ ಇದು ಅತ್ಯಂತ ಅಪಾಯಕಾರಿ ಹಾವಾಗಿದೆ.