Connect with us

Districts

ಮನೆಯ ಆವರಣದಲ್ಲಿ ಸಿಕ್ತು 10 ಅಡಿ ಉದ್ದದ ಕಾಳಿಂಗ-ಹಿಡಿಯಲು ಹೋದ್ರೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತು

Published

on

ಕಾರವಾರ: ಮನೆಯ ಆವರಣದಲ್ಲಿ 10 ಅಡಿ ಉದ್ದದ ಬೃಹತ್ತ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯಲು ಹೋದಾಗ ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡಿತು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ದೀಪಕ್ ನಾಯ್ಕ್ ಎನ್ನುವವರ ಮನೆಯ ಆವರಣದಲ್ಲಿ ಕಾಳಿಂಗ ಸರ್ಪ ಕಂಡಿತ್ತು. ಕಾಳಿಂಗ ಸರ್ಪ ನೋಡಿದ ಮನೆಯವರು ಆತಂಕಕೊಳಗಾಗಿದ್ದರು. ತಕ್ಷಣ ವಿಷಯವನ್ನ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗೆ ಹಾಗೂ ಉರಗ ಪ್ರೇಮಿ ಮಹೇಶ್ ನಾಯ್ಕ್ ಗಮನಕ್ಕೆ ತಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಹೇಶ್ ನಾಯ್ಕ್ ಹಾವನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಳಿಂಗ ಸರ್ಪ ಸುಮಾರು ಹತ್ತು ಅಡಿ ಉದ್ದವಿದ್ದು ಹಟ್ಟಿಕೇರಿ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಕಾಣಿಸಿಕೊಂಡಿದೆ.

ಕಾಳಿಂಗ ಸರ್ಪ ನೋಡಿ ಆತಂಕದಲ್ಲಿದ್ದ ಜನರಿಗೆ ಹಾವನ್ನ ಹಿಡಿದ ನಂತರ ಆತಂಕದಿಂದ ದೂರವಾದರು. ಹಿಡಿದ ಕಾಳಿಂಗವನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

https://youtu.be/WItxEokmaIs

Click to comment

Leave a Reply

Your email address will not be published. Required fields are marked *