ಅಬುಜಾ: ಹಡಗೊಂದು (Ship) ಮುಳುಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಸುಮಾರು 60 ಜನರು ನಾಪತ್ತೆಯಾಗಿರುವ ಘಟನೆ ನೈಜೀರಿಯಾದ (Nigeria) ಅನಂಬ್ರಾ (Anambra) ರಾಜ್ಯದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಹಡಗಿನಲ್ಲಿ 85 ಜನರಿದ್ದರು. ಭಾರೀ ಅಲೆಗಳ ನಡುವೆ ಹಡಗು ಮುಳುಗಿದ್ದು, ಅದರಲ್ಲಿದ್ದ 10 ಜನರು ಸಾವನ್ನಪ್ಪಿದ್ದಾರೆ. 60 ಜನ ನಾಪತ್ತೆಯಾಗಿದ್ದು, ಅವರ ರಕ್ಷಣೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಪರ ಘೋಷಣೆ
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಇದು ಸ್ಥಳೀಯವಾಗಿ ತಯಾರಿಸಲಾದ ಹಡಗಾಗಿದ್ದು, ಸಮುದ್ರಕ್ಕೆ ಇಳಿದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್ ಹಾಳಾಗಿದೆ. ಬಳಿಕ ಭಾರೀ ಪ್ರಮಾಣದ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್ ಸರ್ಕಾರಿ ಟಿವಿ ಹ್ಯಾಕ್ ಮಾಡಿದ ಪ್ರತಿಭಟನಾಕಾರರು
ಈಗಾಗಲೇ 15 ಜನರನ್ನು ರಕ್ಷಿಸಲಾಗಿದೆ. ನೈಜೀರಿಯಾ ಸೇನೆಯ ಮಿಲಿಟರಿ ವಿಪತ್ತು ನಿರ್ವಹಣಾ ಘಟಕ ಶೋಧಕಾರ್ಯಕ್ಕೆ ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.