ಯುಎಸ್‌ನಲ್ಲಿ ಕಾರು ಹರಿದು 10 ಮಂದಿ ಸಾವು – 35ಕ್ಕೂ ಹೆಚ್ಚು ಮಂದಿಗೆ ಗಾಯ

Public TV
1 Min Read
USA ACCIDENT

– ಚಾಲಕನಿಂದ ಜನರ ಮೇಲೆ ಗುಂಡಿನ ದಾಳಿ
– ಅನುಮಾನಾಸ್ಪದ ಸ್ಫೋಟಕ ಸಾಧನ ಪತ್ತೆ

ವಾಷಿಂಗ್ಟನ್‌: ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್‌ನಲ್ಲಿ (New Orleans In USA) ಜನಸಂದಣಿ ಮೇಲೆ ಪಿಕಪ್‌ ಟ್ರಕ್ (Pickup truck) ನುಗ್ಗಿದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್ಮಸ್‌ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಟ್ರಕ್‌ ಚಲಾಯಿಸಿದ ಚಾಲಕ ಅಪಘಾತ ನಡೆದ ಬಳಿಕ ಜನರ ಗುಂಪಿನತ್ತ ಏಕಾಏಕಿ ಗುಂಡು ಹಾರಿಸಿದ್ದು, ಪೊಲೀಸರೊಂದಿಗೂ ಗುಂಡಿನ ಚಕಮಕಿ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

USA ACCIDENT 2

ಸದ್ಯಕ್ಕೆ ಸಾವು-ನೋವುಗಳ ಸಂಖ್ಯೆ ನಿಖರವಾಗಿಲ್ಲ. ಗಾಯಗೊಂಡ ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್‌ – 8 ಪಾಕ್‌ ಪ್ರಜೆಗಳಿಗೆ 20 ವರ್ಷ ಜೈಲು

ಇನ್ನೂ ಘಟನೆಯ ದೃಶ್ಯಾವಳಿಗಳನ್ನು ಪ್ರತ್ಯಕ್ಷದರ್ಶಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೊಂದು ಹತ್ಯಾಕಾಂಡ ಎಂದು ಕರೆದಿದ್ದಾರೆ. ಟ್ರಕ್‌ ಚಾಲಕ ಹತ್ಯಾಕಾಂಡ ನಡೆಸಲೆಂದೇ ಉದ್ದೇಶಪೂರ್ಕವಾಗಿ ದಾಳಿ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ ದರ್ಶನದೊಂದಿಗೆ ಹೊಸ ವರ್ಷ ಸ್ವಾಗತ!

ಈಗಾಗಲೇ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಸಂಸ್ಥೆಯು ಪ್ರಕರಣದ ತನಿಖೆ ನಡೆಸಲು ಮುಂದಾಗಿದೆ. ಮಾರಣಾಂತಿಕ ಅಪಘಾತ ನಡೆದ ಸ್ಥಳದಲ್ಲಿ ಅನುಮಾನಾಸ್ಪದ ಸ್ಫೋಟಕ ಸಾಧನಗಳು (Explosive Device) ಕಂಡುಬಂದಿವೆ ಎಂದು ಎಫ್‌ಬಿಐ ಹೇಳಿದೆ. ಇದನ್ನೂ ಓದಿ: 179 ಮಂದಿ ಬಲಿ ಪಡೆದ ದ.ಕೊರಿಯಾ ಡೆಡ್ಲಿ ವಿಮಾನ ಅಪಘಾತದಲ್ಲಿ ಇಬ್ಬರು ಬದುಕುಳಿದಿದ್ದು ಹೇಗೆ?

Share This Article