ನವದೆಹಲಿ: 30 ವರ್ಷ ಹಳೆಯ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ(ಎನ್‍ಟಿಪಿಸಿ) ಬಾಯ್ಲರ್ ಸ್ಫೋಟಗೊಂಡ ಪರಿಣಾಮ 10 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ನಡೆದಿದೆ.
ಉಚಾಹಾರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಬಾಯ್ಲರ್ ಪೈಪ್ ಒಡೆದು ಈ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
Advertisement
ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಗಾಯಗೊಂಡವರ ಪೈಕಿ ಹಲವರ ದೇಹ ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.
Advertisement
ಗಾಯಗೊಂಡವರನ್ನು ಎನ್‍ಟಿಪಿಸಿ ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಬಾಯ್ಲರ್ ಪೈಪ್ ಒಡೆದ ಬಳಿಕ ಘಟಕವನ್ನು ಈಗ ಮುಚ್ಚಲಾಗಿದೆ. 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊದಿರುವ 5 ಘಟಕ 1988ರಲ್ಲಿ ಆರಂಭಗೊಂಡಿತ್ತು. 500 ಮೆಗಾ ವ್ಯಾಟ್ ಸಾಮರ್ಥ್ಯದ 6ನೇ ಘಟಕ ಈ ವರ್ಷವೇ ಆರಂಭಗೊಳ್ಳಬೇಕಿತ್ತು.
Advertisement
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
Images of #NTPC power plant after blast @abpnewstv @UPGovt informs 12 dead and 200 injured so far @CMOfficeUP pic.twitter.com/wSpJygigGy
— पंकज झा (@pankajjha_) November 1, 2017
An unfortunate accident in the boiler of 500MW under trial unit of NTPC– Unchahar occurred this afternoon: NTPC
— ANI UP/Uttarakhand (@ANINewsUP) November 1, 2017
Raebareli: People injured in ash-pipe explosion at #NTPC plant being treated at district hospital. pic.twitter.com/oU8Y1Qr83r
— ANI UP/Uttarakhand (@ANINewsUP) November 1, 2017
Our primary objective is to provide immediate medical treatment to those injured: UP ADG (Law and Order) on #NTPC Explosion pic.twitter.com/muVuqEC6QJ
— ANI UP/Uttarakhand (@ANINewsUP) November 1, 2017
Rescue operations underway in close coordination with District Administration. Injured persons are being shifted to nearby hospitals: NTPC
— ANI UP/Uttarakhand (@ANINewsUP) November 1, 2017
NTPC Explosion: A 32-member team of National Disaster Response Force (NDRF) leaves for Unchahar #Raebareli
— ANI UP/Uttarakhand (@ANINewsUP) November 1, 2017
#SpotVisuals from Raebareli: Ash-pipe explosion at NTPC plant; at least 100 injured. pic.twitter.com/cgnaelrko3
— ANI UP/Uttarakhand (@ANINewsUP) November 1, 2017