Connect with us

ಶೇ.23 ರಷ್ಟು ವಿಮೆ ಪ್ರೀಮಿಯಂ ದರ ಇಳಿಕೆಗೆ ನಿರ್ಧಾರ- 10 ದಿನಗಳ ಲಾರಿ ಮಷ್ಕರ ಅಂತ್ಯ

ಶೇ.23 ರಷ್ಟು ವಿಮೆ ಪ್ರೀಮಿಯಂ ದರ ಇಳಿಕೆಗೆ ನಿರ್ಧಾರ- 10 ದಿನಗಳ ಲಾರಿ ಮಷ್ಕರ ಅಂತ್ಯ

ಬೆಂಗಳೂರು: ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಇಂದು ಒಂದೆಡೆ ಲಾರಿ ಮಾಲೀಕರು ವಿಮಾ ಪ್ರಾಧಿಕಾರದ ಜೊತೆ ಸಂಧಾನಕ್ಕೆ ಕೂತ್ರೆ, ಇನ್ನೊಂದಡೆ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊನೆಗೂ ಲಾರಿ ಮಾಲೀಕರ ಬೇಡಿಕೆಗೆ ಆಸ್ತು ಎಂದಿದ್ದಾರೆ.

ಹೈದರಾಬಾದಿನಲ್ಲಿ ಐಎಆರ್‍ಡಿಎ ಜೊತೆ ಶನಿವಾರದಂದು ಸಂಧಾನ ವಿಫಲವಾಗಿತ್ತು. ಇದ್ರಿಂದ ಲಾರಿ ಮಾಲೀಕರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದಾಗ ಇಂದು ಮತ್ತೆ ಸಭೆ ಕರೆದು ಶೇ 50.ರಷ್ಟಿದ್ದ ವಿಮೆ ಪ್ರೀಮಿಯಮ್ ದರವನ್ನು ಶೇ 23. ರಷ್ಟು ಇಳಿಕೆ ಮಾಡಲು ನಿರ್ಧರಿಸಲಾಗಿದೆ.

ಇನ್ನೊಂದೆಡೆ ಶಾಂತಿನಗರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ರಾಮಲಿಂಗಾ ರೆಡ್ಡಿ ಟೋಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಜೊತೆ ಭೇಟಿಗೆ ಅವಕಾಶ ಮಾಡಿಕೊಡೋದಾಗಿ ಬೇಡಿಕೆ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದ್ರು. ಅಲ್ಲದೇ ಆರ್‍ಟಿಓ ದಂಡದ ಬಗ್ಗೆಯೂ ಚರ್ಚೆ ಮಾಡುವ ಭರವಸೆ ನೀಡಿದ್ರು. ಇದ್ರಿಂದ ಲಾರಿಮಾಲೀಕರು ಮುಷ್ಕರ ಕೈಬಿಟ್ಟಿದ್ದಾರೆ.

Advertisement
Advertisement