ರಾಯಚೂರು: ಇಡೀ ದೇಶದಲ್ಲಿ ಜಿಲ್ಲೆ ಈಗ ನಂಬರ್ ಒನ್ ಆಗಿದೆ. ಅಖಿಲ ಭಾರತ ಮಹತ್ವಾಕಾಂಕ್ಷೆಯ ಜಿಲ್ಲಾ ಡೆಲ್ಟಾ ಶ್ರೇಯಾಂಕ ಪ್ರಕಟವಾಗಿದ್ದು, ಕೇಂದ್ರದ ನೀತಿ ಆಯೋಗದ ಸಮೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್ ರ‍್ಯಾಂಕ್ ನೀಡಲಾಗಿದೆ. ಸಮಗ್ರ ಸಾಧನೆಯಲ್ಲಿ ಜಿಲ್ಲೆಗೆ 1ನೇ ರ‍್ಯಾಂಕ್ ಬಂದಿದೆ.
Advertisement
10 ಕೋಟಿ ರೂ. ವಿಶೇಷ ಬಹುಮಾನಕ್ಕೂ ರಾಯಚೂರು (Raichur) ಜಿಲ್ಲೆ ಅರ್ಹತೆ ಪಡೆದಿದೆ. ಕೃಷಿ, ಶಿಕ್ಷಣ, ಮೂಲ ಸೌಕರ್ಯ, ಆರೋಗ್ಯ, ಆರ್ಥಿಕ ಸೇರ್ಪಡೆ ಹಾಗೂ ಕೌಶಲ್ಯ ಅಭಿವೃದ್ಧಿ ಸೇರಿ ಜಿಲ್ಲೆಯ ಸ್ಥಿತಿಗತಿಗಳ ವಾಸ್ತವ ವರದಿಗಳ ಪರಿಶೀಲನೆ ನಡೆಸಿ ನೀತಿ ಆಯೋಗ ರ‍್ಯಾಂಕ್ ನೀಡಿದೆ. ದೇಶದ ಒಟ್ಟು 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರಿಗೆ ಮೊದಲ ಸ್ಥಾನ ಬಂದಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಡ್ರಗ್ಸ್ ಚಾಕ್ಲೇಟ್ ದಂಧೆ- FSL ವರದಿ ಬೆನ್ನಲ್ಲೇ ಇಬ್ಬರ ಬಂಧನ
Advertisement
Advertisement
ಶಿಕ್ಷಣ ಹಾಗೂ ಕೃಷಿಯಲ್ಲಿ ಈ ಮೊದಲು ಮೊದಲ ರ‍್ಯಾಂಕ್ ಪಡೆದಿದ್ದ ಜಿಲ್ಲೆ ಜೂನ್ ತಿಂಗಳ ಸಮೀಕ್ಷೆಯಲ್ಲಿ ಸಮಗ್ರ ಸಾಧನೆಯಲ್ಲಿ 1ನೇ ರ್ಯಾಂಕ್ ಪಡೆದಿದೆ. ಕೇಂದ್ರ ಸರ್ಕಾರ ಹಾಗೂ ನೀತಿ ಆಯೋಗದಿಂದ ಹೆಚ್ಚುವರಿ ಅನುದಾನ ಪಡೆಯಲಿದೆ. ಜಿಲ್ಲೆ ಮೊದಲ ರ್ಯಾಂಕ್ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಸಿಬ್ಬಂದಿ ಕಾರ್ಯವೈಖರಿ ಶ್ಲಾಘಿಸಿದ್ದಾರೆ.
Advertisement
Web Stories