ವಿಜಯನಗರ: ಕಳೆದ ಮೂರು ದಿನಗಳ ಹಿಂದೆ ವಿಜಯನಗರ ಪೊಲೀಸರು ಒಂದುವರೆ ಕೋಟಿ ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಅರೆಸ್ಟ್ ಕೂಡಾ ಆಗಿದ್ರು. ಒಂದೂವರೆ ಕೋಟಿ ತಿಮಿಂಗಿಲ ವಾಂತಿ ಬೆನ್ನತ್ತಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದು, ಅವರಿಗೆ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ವಾಂತಿ ಸಿಕ್ಕಿದೆ.
ಡಿಸೆಂಬರ್ 21 ರಂದು ವಿಜಯನಗರ ಬಸ್ ನಿಲ್ದಾಣದ ಸುತ್ತ-ಮುತ್ತ ಇಬ್ಬರು ಅನುಮಾನಸ್ಪಾದವಾಗಿ ಓಡಾಡುತ್ತಿದ್ದರು. ಈ ಹಿನ್ನೆಲೆ ಖಚಿತ ಮಾಹಿತಿ ಪಡೆದುಕೊಂಡು ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪೂರದ ವೆಂಕಟೇಶ್ ನಾಯಕ್ ಹಾಗೂ ಅಬ್ದುಲ್ ವಹಾಬ್ ರನ್ನ ಹೊಸಪೇಟೆ ಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದನ್ನೂ ಓದಿ: 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್
ವಿಚಾರಣ ವೇಳೆ ಅವರ ಬಳಿ ಒಂದುವರೆ ಕೆಜಿ ತಿಮಿಂಗಿಲ ವಾಂತಿ ಪತ್ತೆಯಾಗಿತ್ತು. ಇಬ್ಬರನ್ನು ವಿಚಾರಣೆ ಮಾಡಿದಾಗ ವೆಂಕಟೇಶ್ ಹಾಗೂ ಅಬ್ದುಲ್ ವಹಾನ್ ಇನ್ನು ನಾಲ್ವರ ಹೆಸರನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಈ ಪರಿಣಾಮ ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ಮಹೇಶ್ ಹಾಗೂ ವಿಜಯಪುರದ ಶ್ರೀಧರ್.ಎಸ್ ಆರು ಜನರನ್ನ ಪೊಲೀಸರು ಅರೆಸ್ಟ್ ಮಾಡಿ ಸುಮಾರು ಒಂದೂವರೆ ಕೆ.ಜಿ ಅಂದ್ರೆ ಒಂದೂವರೆ ಕೋಟಿಯ ತಿಮಿಂಗಲ ವಾಂತಿ ವಶಪಡಿಸಿಕೊಂಡಿದ್ದರು.
ಇದೀಗ ಇದೇ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಕೇವಲ ಒಂದುವರೆ ಕೋಟಿ ಅಲ್ಲ, ಬರೋಬ್ಬರಿ 10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ಸಿಕ್ಕಿದೆ. ಪ್ರಕರಣದ ಮೂರನೇ ಆರೋಪಿ ಭಟ್ಕಳದ ಗಣಪತಿ ಮನೆಯಲ್ಲಿ ಹೊಸಪೇಟೆ ಪೊಲೀಸರು 10 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ ಪೊಲೀಸರು ಆರು ಜನರನ್ನ ಅರೆಸ್ಟ್ ಮಾಡಿದಾಗ ಇನ್ನೇನು ಪ್ರಕರಣ ಮುಗೀತು ಅಂದುಕೊಂಡವರೇ ಜಾಸ್ತಿ. ಆದರೆ ಪೊಲೀಸರಿಗೆ ಅನುಮಾನ ಬಂದು ಪರಿಶೀಲನೆಯನ್ನು ಮಾಡಿದ್ದಾರೆ. ತಿಮಿಂಗಿಲ ವಾಂತಿಗೆ ಮೂಲ ಸಮುದ್ರ ತೀರ, ಅದಕ್ಕೆ ಭಟ್ಕಳದ ಗಣಪತಿಯನ್ನ ಪೊಲೀಸರು ನ್ಯಾಯಾಂಗ ಬಂಧನದಿಂದ ಮತ್ತೆ ವಾಪಸ್ ವಿಚಾರಣೆಗೆ ಕರೆದಿದ್ದಾರೆ. ಪೊಲೀಸರಿಗೆ ಮೊದಲೇ ಗಣಪತಿ ಮೇಲೆ ಅನುಮಾನ ಬಂದಿದ್ದು, ಈತನ ಮನೆಯಲ್ಲಿ ಇನ್ನು ವಾಂತಿ ಇದೆ ಅನ್ನೋದನ್ನ ವೆಂಕಟೇಶ್ ಹಾಗೂ ವಹಾನ್ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದರು. ಇದನ್ನೂ ಓದಿ: ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಕೋಚ್
ಈ ಮಾಫಿಯಾದ ಕಿಂಗ್ ಪಿನ್ ಗಣಪತಿ ಅನ್ನೋದು ಕನ್ಫರ್ಮ್ ಆದ ಮೇಲೆ ಪೊಲೀಸರು ಗಣಪತಿ ವಿಚಾರಣೆ ಮಾಡಿದಾಗ 10 ಕೋಟಿ ಮೌಲ್ಯದ ತಿಮಿಂಗಿಲ ಪತ್ತೆಯಾಗಿದೆ. ಹೊಸಪೇಟೆ ಪಟ್ಟಣ ಪೊಲೀಸರು ಇದನ್ನು ಜಪ್ತಿ ಮಾಡಿದ್ದಾರೆ. ಆದ್ರೆ ಅವರೆಲ್ಲ ಹೊಸಪೇಟೆಗೆ ಯಾಕೆ ಬಂದ್ರೂ ಅನ್ನೋ ಅನುಮಾನ ಇನ್ನೂ ಜನರನ್ನ ಕಾಡ್ತಿದೆ. ಹೊಸಪೇಟೆಯಿಂದ ದುಬೈಗೆ ಹೋಗ್ತಿತ್ತು, ಇಲ್ಲಿಂದಲೇ ವಾಂತಿಯ ಡೀಲ್ ನಡೆದಿತ್ತು ಅನ್ನೋ ಮಾತುಗಳಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.