ಬೆಂಗಳೂರು: ಆರ್ಯ ವೈಶ್ಯ ನಿಗಮ ಮಂಡಳಿ ಮತ್ತು ಬ್ರಾಹ್ಮಣ ನಿಗಮ ಮಂಡಳಿಗೆ (Brahmins Corporation Board) ಈ ಬಜೆಟ್ (Budget 2023) ನಲ್ಲಿ ತಲಾ 10 ಕೋಟಿ ಅನುದಾನ ನೀಡುತ್ತೇನೆ. ಸ್ಥಗಿತಗೊಂಡಿರೋ ವಿದ್ಯಾರ್ಥಿ ವೇತನ (Scholarship) ಬಿಡುಗಡೆಗೂ ಆದೇಶ ನೀಡುತ್ತೇನೆ ಅಂತಾ ಸಿಎಂ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ (JDS) ಸದಸ್ಯರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು. ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಹೆಚ್ಚು ಅನುದಾನಕ್ಕೆ ಮನವಿ ಮಾಡಿದ್ದೇವೆ. ಆದರೂ ಅನುದಾನ ಕೊಟ್ಟಿಲ್ಲ. ಎರಡು ಸಮಾಜಕ್ಕೂ ಈ ಸರ್ಕಾರ ಅನ್ಯಾಯ ಮಾಡಿದೆ. ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದಾಗ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಾಮನ್ ಸಿಎಂ ಎಲ್ಲಾ ವರ್ಗಕ್ಕೂ ಕಾಮನ್ ಸಿಎಂ ಆಗಿ ಕೆಲಸ ಮಾಡಬೇಕು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಕಳ್ಳತನ ತಡೆಯಲು ವಿಜಿಲೆನ್ಸ್ ಪಡೆ ಸ್ಥಾಪನೆ: ಬೊಮ್ಮಾಯಿ
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬ್ರಾಹ್ಮಣ ನಿಗಮದಲ್ಲಿ 6 ಕೋಟಿ ಇದೆ. ಇದನ್ನ ಬಳಕೆ ಮಾಡಿಕೊಳ್ಳಿ. ಆರ್ಯ ವೈಶ್ಯ ನಿಗಮದಲ್ಲಿ ಅನುದಾನ ಇದೆ. ಹೆಚ್ಚುವರಿ ಅನುದಾನ ಕೊಡ್ತೀವಿ. ಆರ್ಯ ವೈಶ್ಯ ನಿಗಮ ಉತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲವನ್ನೂ ಆನ್‌ಲೈನ್ ವ್ಯವಸ್ಥೆಯಲ್ಲಿ ಮಾಡುತ್ತಿದೆ. ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಈ ಬಜೆಟ್ ನಲ್ಲಿ ತಲಾ 10 ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಶುಕ್ರವಾರದ್ದು ಚುನಾವಣಾ ಪ್ರಣಾಳಿಕೆ ಬಜೆಟ್ ಎಂದು ನಮಗೆ ಗೊತ್ತಿದೆ: ಡಿ.ಕೆ ಶಿವಕುಮಾರ್
ಅಲ್ಲದೇ ವಿದ್ಯಾರ್ಥಿ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k