ಲಕ್ನೋ: ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದ 83 ಜನ ಬಿಎಸ್‍ಎಫ್ ಯೋಧರ ಪೈಕಿ 10 ಮಂದಿ ನಾಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಯೋಧರು ಸಾಂಬಾ ಸೆಕ್ಟರ್ ನಿಂದ ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದು, ಬರ್ಧಮನ್ ಮತ್ತು ಧನ್ ಬಾದ್ ರೈಲು ನಿಲ್ದಾಣಗಳ ಮಧ್ಯೆ ಕಾಣೆಯಾಗಿದ್ದಾರೆ. ಈ ಕುರಿತಂತೆ ಅವರ ಸೇನಾ ಕಮಾಂಡರ್ ಮುಘಲ್ ಸರಾಯ್ ಸರ್ಕಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. 10 ಜನ ಬಿಎಎಸ್‍ಎಫ್ ಯೋಧರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
Advertisement
ಪಶ್ಚಿಮ ಬಂಗಾಳದಿಂದ 83 ಜನ ಬಿಎಸ್‍ಎಫ್ ಸೈನಿಕರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಅವರಲ್ಲಿ 10 ಜನ ಸೈನಿಕರು ಹೇಗೋ ಧನ್ ಬಾದ್ ಮತ್ತು ಬರ್ಧಮಾನ್ ರೈಲ್ವೆ ನಿಲ್ದಾಣದ ಮಧ್ಯೆ ಅವರ ಕಮಾಂಡರ್ ಗೆ ತಿಳಿಸದೇ ಕಾಣೆಯಾಗಿದ್ದಾರೆ.
Advertisement
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಘಲ್ ಸರಾಯ್ ಪೊಲೀಸ್ ಇನ್ಸ್ ಪೆಕ್ಟರ್ ಜಿತೇಂದ್ರಕುಮಾರ್ ಯಾದವ್ ಸೈನಿಕರು ಕಣ್ಮರೆಯಾದ ಕುರಿತು ಮಾಹಿತಿ ತಿಳಿದಿದೆ. ಈ ಕುರಿತಂತೆ ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
Advertisement
ಸಾಂಬಾ ಸೆಕ್ಟರ್ ನಿಂದ 83 ಸೈನಿಕರನ್ನೊಳಗೊಂಡ ವಿಶೇಷ ರೈಲು ಹೊರಟಿತ್ತು. ಆದರೆ ಮುಘಲ್ ಸರಾಯ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ 10 ಜನ ಸೈನಿಕರು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Advertisement
Ten Border Security Force soldiers, who were on their way to Jammu and Kashmir, went missing from a special army train between Bardhaman and Dhanbad railway stations
Read @ANI Story | https://t.co/UXrIpNB4Ef pic.twitter.com/ZJbXWvWejI
— ANI Digital (@ani_digital) June 27, 2018