ಅಹಮದಾಬಾದ್: ವಿಶ್ವದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಪಬ್‍ಜಿ ಗೇಮ್ ಆಡುತ್ತಿದ್ದ 10 ಮಂದಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಗುಜರಾತ್‍ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್‍ನ ಸೂರತ್ ಮತ್ತು ರಾಜ್‍ಕೋಟ್‍ನಲ್ಲಿ ನಿಷೇಧಿತ ಪಬ್‍ಜಿ ಗೇಮ್ ಆಡುತ್ತಿದ್ದ ಕಾರಣ ಯುವಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪಬ್‍ಜಿ ಗೇಮ್ ಯುವ ಜನಾಂಗದ ನಡವಳಿಕೆ, ಭಾಷೆ ಸೇರಿದಂತೆ ಹಲವು ಅಂಶಗಳ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿರುವ ಕಾರಣ ಗೇಮ್ ಆಡುವುದನ್ನು ಒಂದು ವಾರದ ಹಿಂದೆಯೇ ನಿಷೇಧ ಮಾಡಲಾಗಿತ್ತು.
ಬಂಧಿತ ಯುವಕರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ಎಸ್‍ಪಿ ವಿಎಸ್ ವಾಂಜರ ತಿಳಿಸಿದ್ದಾರೆ. ಗೇಮ್ ಆಡುವುದಕ್ಕೆ ಅಡಿಕ್ಟ್ ಆಗಿದ್ದ ಯುವಕರು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದ ಅರಿವು ಕೂಡ ಅವರಿಗೆ ಇರಲಿಲ್ಲ ಎಂದು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಸುಮಾರು 100 ಮಿಲಿಯನ್‍ಗೂ ಹೆಚ್ಚು ಡೌನ್‍ಲೋಡ್ ಆಗಿರುವ ಪಬ್‍ಜಿ ಆಟವನ್ನು ದೇಶದಲ್ಲಿ ಗುಜರಾತ್ ರಾಜ್ಯ ಮಾತ್ರ ನಿಷೇಧ ಮಾಡಿದೆ. ಇದೇ ವೇಳೆ ದೇಶದ ಇತರೇ ರಾಜ್ಯಗಳಲ್ಲೂ ಗೇಮ್‍ಗೆ ದಾಸರಾಗಿರುವ ಯುವ ಜನಾಂಗದ ಬಗ್ಗೆ ಹಲವರಿಂದ ಕಾಳಜಿ ವ್ಯಕ್ತವಾಗುತ್ತಿದೆ.
ಗೇಮ್ ಆಡುವವರಲ್ಲಿ ಹಿಂಸಾಚಾರ ಪ್ರಚೋದನೆ ಹಾಗೂ ಶಿಕ್ಷಣದಿಂದ ದೂರವಾಗುವ ಪ್ರವೃತ್ತಿ ಹೆಚ್ಚಾಗುತ್ತದೆ ಎಂದು ಪೋಷಕರು ಹಾಗೂ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಗೋವಾ ಸಚಿವರೊಬ್ಬರು, ಪಬ್‍ಜಿ ಗೇಮ್ ಪ್ರತಿ ಮನೆಯಲ್ಲೂ ಭೂತವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತಾಯಿಯೊಬ್ಬರು ತಮ್ಮ ಮಗನ ಬಗ್ಗೆ ತಿಳಿಸಿ ಪಬ್‍ಜಿ ಗೇಮ್ ವಿಚಾರವನ್ನು ಹಂಚಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv