– 30 ಜನರ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದ ಮ್ಯಾನೇಜರ್
ರಾಯಚೂರು: ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank Of Maharashtra) ಮ್ಯಾನೇಜರ್ ಗೋಲ್ಡ್ ಲೋನ್ (Gold Loan) ಹೆಸರಲ್ಲಿ 10.92 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಬ್ಯಾಂಕ್ ಮ್ಯಾನೇಜರ್ ಕೆ.ನರೇಂದ್ರರೆಡ್ಡಿ ಹಾಗೂ ಮ್ಯಾನೇಜರ್ ಆಪ್ತೆ ಅರುಣಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಗೋಲ್ಡೋನ್ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ
ಗೋಲ್ಡ್ ಲೋನ್ ಹೆಸರಲ್ಲಿ 10 ಕೋಟಿ 92 ಲಕ್ಷ ರೂ. ವಂಚನೆ ಮಾಡಿ ಮ್ಯಾನೇಜರ್ ಪರಾರಿಯಾಗಿದ್ದ. ಅರುಣಾ ಕೆನರಾ ಬ್ಯಾಂಕ್‌ನ ಮಾಜಿ ಸಿಬ್ಬಂದಿಯಾಗಿದ್ದು, ಈ ಹಿಂದೆ ಆಂಧ್ರದ ಕರ್ನೂಲು ಬಳಿ ಆರೋಪಿಗಳಿಬ್ಬರು ಒಂದೆಡೆ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 30 ಜನರ ಹೆಸರಲ್ಲಿ ನಕಲಿ ಖಾತೆ (Fake Account) ತೆರೆದು, ಗೋಲ್ಡ್ ಲೋನ್ ತೆಗೆದುಕೊಂಡು ಬ್ಯಾಂಕ್ ಹಾಗೂ ಗ್ರಾಹಕರಿಗೆ ಮ್ಯಾನೇಜರ್ 10.92 ಕೋಟಿಗೂ ಅಧಿಕ ವಂಚನೆ ಮಾಡಿದ್ದ. ಬಳಿಕ ಅರುಣಾ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದ್ದ. ಈ ಮೂಲಕ ನರೇಂದ್ರರೆಡ್ಡಿ ಬ್ರ‍್ಯಾಂಚ್ ಮ್ಯಾನೇಜರ್ ಸ್ಥಾನದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದ.
ಈ ಕುರಿತು ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ (Cyber Polie Station) ಪ್ರಕರಣ ದಾಖಲಾಗಿತ್ತು. ಕೋಟ್ಯಂತರ ರೂಪಾಯಿ ವಂಚನೆ ಬಳಿಕ ಆರೋಪಿಗಳಿಬ್ಬರು ಶ್ರೀಶೈಲಕ್ಕೆ ತೆರಳಿದ್ದು, ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿರುವ ಪೊಲೀಸರು ಸದ್ಯ 79 ಲಕ್ಷ ರೂ.ಯನ್ನು ಆರೋಪಿಗಳಿಂದ ರಿಕವರಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ವಿಧಾನಸೌಧ ಒಳಗೆ ಹೋಗಿ ನೋಡ್ಬೇಕಾ? – ಆನ್‌ಲೈನ್ ಬುಕ್ಕಿಂಗ್ ಮಾಡಿ ಟಿಕೆಟ್ ಖರೀದಿಸಿ ರೌಂಡ್ಸ್ ಹಾಕಿ