ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ಅನ್ಬುನ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ನಂದಿನಿ ಲೇಔಟ್ ಪಿಎಸ್ ಐ ಜೋಗಾನಂದ್ ಫೈರಿಂಗ್ ಮಾಡಿದ್ದಾರೆ.
ಅನ್ಬುನ್ ಮತ್ತು ತಂಡ ಲಾರಿ ಚಾಲಕನೊಬ್ಬನಿಗೆ ಚಾಕು ಇರಿದು 30 ಸಾವಿರ ದೋಚಿತ್ತು. ನಂತರ ಅನ್ಬುನ್ ಕೂಲಿನಗರದಲ್ಲಿ ಅಡಗಿದ್ದ. ಇಂದು ಮುಸುಕಿನಲ್ಲಿ ಅನ್ಬುನ್ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ.
ಪಿಸಿ ಅಭಿಷೇಕ್ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಜೋಗಾನಂದ್ ರಿಂದ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಿಂದ ಗಾಯಗೊಂಡ ಆರೋಪಿಯನ್ನು ಮತ್ತು ಪಿಸಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅನ್ಬುನ್ 10 ದಿನದಲ್ಲಿ ಬರೋಬ್ಬರಿ 10 ದರೋಡೆ ಮಾಡಿದ್ದನು. ಅಲ್ಲದೆ ಹಲವು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಕೆಲ ದಿನಗಳ ಹಿಂದೆ ಲಾರಿ ಚಾಲಕರೊಬ್ಬರಿಗೆ ಚಾಕು ಇರಿದು 30 ಸಾವಿರ ರಾಬರಿ ಮಾಡಿದ್ದ. ಈ ಸಂಬಂಧ ಅನ್ವರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು.