ಲಕ್ನೋ: ಯೂಟ್ಯೂಬ್ ವಿಡೀಯೋ ನೋಡಿ ಹ್ಯಾಕಿಂಗ್ ಮಾಡುವುದನ್ನು ಕಲಿತ 11 ವರ್ಷದ ಬಾಲಕ ತನ್ನ ತಂದೆಗೆ 10 ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಗಾಜಿಯಾಬಾದ್‍ನಲ್ಲಿ ನಡೆದಿದೆ. ಹಣ ನೀಡದೇ ಇದ್ದಲ್ಲಿ ನಿಮ್ಮ ಅಶ್ಲೀಲ ಚಿತ್ರಗಳನ್ನು ಮತ್ತು ಕುಟುಂಬದ ವೈಯಕ್ತಿಕ ವಿವರಗಳನ್ನು ಆನ್‍ಲೈನ್‍ನಲ್ಲಿ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಈ ವಿಚಾರವಾಗಿ ಬಾಲಕ ತಂದೆ, ಸೈಬರ್ ಕ್ರಿಮಿನಲ್ಸ್ ತಮ್ಮ ಇ-ಮೇಲ್ ಐಡಿಯನ್ನು ಜನವರಿ 1 ರಂದು ಹ್ಯಾಕ್ ಮಾಡಿದ್ದು, ಜೊತೆಗೆ ಮೇಲ್ ಐಡಿಯ ಪಾಸ್ ವಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಬದಲಿಸಿದ್ದಾರೆ. ಅಲ್ಲದೆ ತನಗೆ ಮೇಲ್ ಕಳುಹಿಸಿ 10 ಕೋಟಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಕುಟುಂಬಸ್ಥರಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಶ್ಚರ್ಯಕಾರಿ ಸಂಗತಿಯೊಂದು ದೊರೆತಿದೆ. ದೂರುದಾರರ ಐಪಿ(ಇಂಟರ್‍ನೆಟ್ ಪ್ರೋಟೋಕಾಲ್) ವಿಳಾಸವನ್ನು ಪರಿಶೀಲಿಸಿದಾಗ ವ್ಯಕ್ತಿಯ ಕುಟುಂಬಸ್ಥರೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಕುಟುಂಬದ ಎಲ್ಲಾ ಸದಸ್ಯರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ವ್ಯಕ್ತಿಯ 11 ವರ್ಷದ ಮಗ ಆರೋಪಿ ಎಂದು ತಿಳಿದುಬಂದಿದೆ.
Advertisement
5 ನೇ ತರಗತಿ ಓದುತ್ತಿದ್ದ ಈ ವಿದ್ಯಾರ್ಥಿ ಆನ್‍ಲೈನ್ ಮೂಖಾಂತರ ಸೈಬರ್ ಕ್ರೈಂ ಹೇಗೆ ಮಾಡುವುದು ಎಂಬುದನ್ನು ಯೂಟ್ಯೂಬ್‍ನಲ್ಲಿ ಕಲಿತುಕೊಂಡಿದ್ದಾನೆ. ಅಲ್ಲದೆ ಯೂಟ್ಯೂಬ್‍ನಲ್ಲಿ ಹಣ ಸುಲಿಗೆ ಮಾಡಲು ಹೇಗೆ ಇ-ಮೇಲ್ ಮಾಡಬೇಕು ಎಂಬ ಹಲವು ವೀಡಿಯೋಗಳನ್ನು ನೋಡಿದ್ದಾನೆ.
Advertisement
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಕ್ರಿಮಿನಲ್ ಬೆದರಿಕೆ, ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸು ಉದ್ದೇಶಪೂರ್ವಕ ಅವಮಾನ ಮತ್ತು ಗಾಜಿಯಾಬಾದ್‍ನ ಐಟಿ ಕಾಯ್ದೆ ಸೆಕ್ಷನ್ 66ಡಿ ಅಡಿ ಪ್ರಕರಣ ದಾಖಲಿಸಲಾಗಿದೆ.