– ಮಗನ ಮುಂದಯೇ ಜೀವಬಿಟ್ಟ ತಾಯಿ
ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲದೇ ಸಾವನ್ನಪ್ಪುವವರು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಂತೆಯೇ ಇಂದು ರಾತ್ರಿಕೂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪಿದ್ದಾರೆ.
ಸರ್ಕಾರ ಬೆಂಗಳೂರಿನಲ್ಲಿ ಸಾವಿರ ಬೆಡ್‍ಗಳು ಖಾಲಿ ಇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇದೇ ಬೆಂಗಳೂರಿನಲ್ಲಿ ಒಂದು ಕಡೆ ಬೆಡ್ ಇಲ್ಲದೇ ಚಿಕಿತ್ಸೆ ಸಿಗದೆ ಜನರು ಸಾಯುತ್ತಿದ್ದಾರೆ. ಈಗ ಬೆಡ್ ಇಲ್ಲದೇ ಮಹಿಳೆಯೊಬ್ಬರು ಮಗನ ಮುಂದೆಯೇ ವಿಲವಿಲ ಒದ್ದಾಡಿ ಜೀವಬಿಟ್ಟಿದ್ದಾರೆ.
ವಾರದ ಹಿಂದೆಯೇ ಚೆನ್ನಾಗಿದ್ದ 42 ವರ್ಷದ ಮಹಿಳೆ, ಇತ್ತೀಚೆಗಷ್ಟೇ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ ಮಹಿಳೆಯಲ್ಲಿ ದಿಢೀರ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಮಗ ಹರಸಾಹಸಪಟ್ಟಿದ್ದಾನೆ. ನಂತರ ಕೆಸಿ ಜನೆರಲ್ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಅಲ್ಲಿ ಐಸಿಯೂ ವಾರ್ಡ್ ಖಾಲಿ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬಂದಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಮಹಿಳೆ ಮಗ, ನಮ್ಮ ಅಮ್ಮನಿಗೆ ಮುಂಚೆಯೇ ಶುಗರ್ ಇತ್ತು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆಗ ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದವು. ಅಲ್ಲಿ ಐಸಿಯೂ ಇಲ್ಲ. ನಿಮ್ಮ ತಾಯಿಗೆ ಆಕ್ಸಿಜನ್ ಅವಶ್ಯಕತೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಆದರೆ ಅಂಬುಲೆನ್ಸ್‌ನಲ್ಲೇ ಇಡೀ ಬೆಂಗಳೂರಿನ ಎಲ್ಲ ಆಸ್ಪತ್ರೆಗೂ ಹೋದರು ಬೆಡ್ ಸಿಗದೇ, ಅಮ್ಮ ಅಂಬುಲೆನ್ಸ್‌ನಲ್ಲೇ ಸಾವನ್ನಪ್ಪಿದರು ಎಂದು ಹೇಳಿದ್ದಾರೆ.