ಬೆಂಗಳೂರು: ಬಿಗ್ಬಾಸ್ ಸೀಸನ್-7ರ ವಿನ್ನರ್ ನಟ ಶೈನ್ ಶೆಟ್ಟಿ ಅವರಿಗೆ ಬಿಗ್ಬಾಸ್ ಕಾರ್ಯಕ್ರಮದ ಪ್ರಶಸ್ತಿಯ ಕಾರು ದೊರಕಿದೆ. ಈ ಕಾರನ್ನು ಲಾಕ್ಡೌನ್ ಮುಗಿದ ಬಳಿಕವೇ ಕಂಪನಿ ಕಾರನ್ನು ಶೈನ್ ಶೆಟ್ಟಿಗೆ ನೀಡಿದ್ದು, ಇದರ ವಿಡಿಯೋವನ್ನು ಶೈನ್ ಶೆಟ್ಟಿ ಈಗ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಸೀಸನ್-7ರ ವಿನ್ನರ್ ಶೈನ್ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿ ಮೂಲಕ ಜನರಿಗೆ ಹತ್ತಿರವಾಗಿದ್ದ ಅವರು, ನಂತರ ತೆರೆ ಮರೆಗೆ ಜಾರಿದ್ದರು. ಆದರೆ ಬಿಗ್ಬಾಸ್ ಸೀಸನ್-7ರಲ್ಲಿ ಕಾಣಿಸಿಕೊಂಡು ಕರುನಾಡ ಜನರ ಮನಸ್ಸುನ್ನು ಕದ್ದಿದ್ದರು. ಈಗ ಅವರ ಗೆಲುವಿಗೆ ಪ್ರಶಸ್ತಿಯಾಗಿ ಬಂದ ಕಾರನ್ನು ಟಾಟಾ ಮೋಟರ್ಸ್ ಅವರಿಗೆ ನೀಡಿದೆ.
Advertisement
Advertisement
ಬಿಗ್ಬಾಸ್ ಕಾರ್ಯಕ್ರಮದ ಪ್ರಯೋಜಕತ್ವವನ್ನು ಪಡೆದುಕೊಂಡಿದ್ದ, ಟಾಟಾ ಮೋಟರ್ಸ್ ಕಂಪನಿ ವಿನ್ನರ್ ಗೆ ಕಾರನ್ನು ಕೊಡುಗೆಯಾಗಿ ಕೊಡುವುದಾಗಿ ಹೇಳಿತ್ತು. ಅಂತೆಯೇ ಈಗ ಕಾರನ್ನು ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನೀಡಿದೆ. ಈ ಕಾರನ್ನು ಮೊದಲೇ ನೀಡಬೇಕಿತ್ತು. ಆದರೆ ಹೊಸ ಮಾದರಿಯ ಕಾರನ್ನು ನೀಡುವ ಸಲುವಾಗಿ ಇಷ್ಟು ದಿನ ನೀಡಿರಲಿಲ್ಲ. ಈಗ ಟಾಟಾ ಮೋಟರ್ಸ್ ಅವರು ಉನ್ನತ ಮಟ್ಟದ ಟಾಟಾ ಆಲ್ಟ್ರೋಜ್ ಹೊಸ ಮಾದರಿಯ ಕಾರನ್ನು ಶೈನ್ ಶೆಟ್ಟಿಯವರಿಗೆ ನೀಡಿದೆ.
Advertisement
Advertisement
ಈ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ, ಟಾಟಾ ಆಲ್ಟ್ರೋಜ್ ಬಿಗ್ಬಾಸ್ ಸೀಸನ್-7 ಕಾರ್. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸ ಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್ ಕನಕಪುರ ರೋಡ್ ಇವರಿಗೆ ಧನ್ಯವಾದಗಳು. ಹಾಗೆಯೇ ಕೊಡುಗೆ ನೀಡಿರುವ ಟಾಟಾ ಮೋಟರ್ಸ್ ಅವರಿಗೂ ಧನ್ಯವಾದ ಎಂದು ಶೈನ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಶೈನ್ ಶೆಟ್ಟಿ ತಮ್ಮ ಫುಡ್ ಟ್ರಕ್ಗೆ ಹೊಸ ರೂಪ ನೀಡಿ ಮತ್ತೆ ಪ್ರಾರಂಭಿಸಿದ್ದಾರೆ. ಶೈನ್ ಶೆಟ್ಟಿ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಅವಕಾಶಗಳು ಸಿಗದಿದ್ದಾಗ ಟ್ರಕ್ ಫುಡ್ ಮೂಲಕ ಶೈನ್ ಜೀವನ ಸಾಗಿಸುತ್ತಿದ್ದರು. ನಂತರ ರಿಯಾಲಿಟಿ ಶೋ ಬಿಗ್ಬಾಸ್ಗೆ ಹೋಗಲು ಆಫರ್ ಬಂದಿತ್ತು. ಶೈನ್ ಬಿಗ್ಬಾಸ್ ಮನೆಗೆ ಹೋಗಿದ್ದಾಗ ಅವರ ತಾಯಿ ಈ ಫುಡ್ ಟ್ರಕ್ ನಿಭಾಯಿಸಿಕೊಂಡು ಹೋಗುತ್ತಿದ್ದರು.
ಕೊರೊನಾ ಲಾಕ್ಡೌನ್ನಿಂದ ಗಲ್ಲಿ ಕಿಚನ್ ಅನ್ನು ಕ್ಲೋಸ್ ಮಾಡಲಾಗಿತ್ತು. ಲಾಕ್ಡೌನ್ ಸಡಿಲಿಕೆ ಆದ ಮೇಲೂ ಜನರ ಆರೋಗ್ಯ ದೃಷ್ಟಿಯಿಂದ ಇನ್ನೂ ಕೆಲವು ದಿನ ಫುಡ್ ಟ್ರಕ್ ಓಪನ್ ಮಾಡುವುದಿಲ್ಲ ಎಂದು ಶೈನ್ ಶೆಟ್ಟಿ ತಿಳಿಸಿದ್ದರು. ಇದೀಗ ಮತ್ತೆ `ಗಲ್ಲಿ ಕಿಚನ್’ ಫುಡ್ ಟ್ರಕ್ ಆರಂಭಿಸಿದ್ದಾರೆ. ಸದ್ಯಕ್ಕೆ ಶೈನ್ ಶೆಟ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷೆಯ `ರುದ್ರ ಪ್ರಯಾಗ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.