– ಸರ್ಕಾರ ಮಾರ್ಗಸೂಚಿಗಳೇನು..?
ಬೆಂಗಳೂರು: ಕಳೆದ 10 ತಿಂಗಳಿಂದ ಸ್ಥಗಿತಗೊಂಡಿದ್ದ ಪದವಿ ಕಾಲೇಜುಗಳು ಇಂದಿನಿಂದ ಆರಂಭವಾಗಲಿದೆ. ಬ್ರಿಟನ್ ಕೊರೊನಾ ಆತಂಕ, ವ್ಯಾಕ್ಸಿನ್ ಸಂಭ್ರಮದ ನಡುವೆ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಡಿಗ್ರಿ ಕಾಲೇಜುಗಳೂ ಪ್ರಾರಂಭ ಆಗಲಿವೆ.
Advertisement
ಕೊರೊನಾ ಕಡಿಮೆ ಆಗ್ತಿರೋ ಹಿನ್ನೆಲೆಯಲ್ಲಿ ಪ್ರಥಮ, ದ್ವಿತೀಯ ವರ್ಷದ ಪದವಿ ತರಗತಿಗಳು, ಡಿಪ್ಲೋಮಾ, ಎಂಜಿನಿಯರಿಂಗ್, ಐಟಿಐ ಕಾಲೇಜ್, ಹಾಸ್ಟಲ್ಗಳು ಇಂದಿನಿಂದ ಶುರು ಆಗಲಿವೆ. ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಈ ಬಾರಿ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗಳನ್ನ ಮಾಡಲಾಗಿದೆ.
Advertisement
Advertisement
ಕಡ್ಡಾಯವಾಗಿ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಿಸೋ ಅಗತ್ಯ ಇಲ್ಲ. ಕೊರೊನಾ ರೋಗ ಲಕ್ಷಣ ಇರೋರು ಮಾತ್ರ ಟೆಸ್ಟ್ ಮಾಡಿಸಿ ವರದಿ ಇಟ್ಟುಕೊಂಡು ಇರಬೇಕು ಅಂತ ತಿಳಿಸಲಾಗಿದೆ. ಕಳೆದ ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ ತರಗತಿಗಳು ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ಓಪನ್ ಆಗಿದೆ.
Advertisement
ಸರ್ಕಾರದ ಮಾರ್ಗಸೂಚಿಗಳೇನು..?
ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಒತ್ತಡ ಹೇರುವಂತಿಲ್ಲ. ಕಾಲೇಜಿಗೆ ಬರಲು ಆಗದಿದ್ರೆ ಆನ್ಲೈನ್ ಪಾಠ ಕೇಳಬಹುದು. ಆದ್ರೆ, ವಿದ್ಯಾರ್ಥಿಗಳಿಗೆ ದಾಖಲಾತಿ ಕಡ್ಡಾಯ. ಕಾಲೇಜಿಗೆ ಬರೋ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರಬೇಕು. ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.
ಕಾಲೇಜಿನ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಮಾಸ್ಕ್ ಕಡ್ಡಾಯ. ಎಲ್ಲಾ ಕೊಠಡಿಗಳಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು. ಪ್ರತಿನಿತ್ಯ ಕಾಲೇಜು ಮುಗಿದ ಬಳಿಕ ಕೊಠಡಿಗಳು ಸ್ಯಾನಿಟೈಸ್ ಆಗಬೇಕು. ಕಾಲೇಜಿನಲ್ಲಿ ಸಾಮಾಜಿಕ ಅಂತರ ಪಾಲನೆಗೆ ವೇಳಾಪಟ್ಟಿ ಸಿದ್ಧಪಡಿಸಬೇಕು. ವಿದ್ಯಾರ್ಥಿಗಳ ಹಾಜರಾತಿ ಪ್ರತಿ ಕೊಠಡಿಗೆ ಶೇ.50ರಷ್ಟು ಮೀರುವಂತಿಲ್ಲ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆ ಪಾಳಿ ವ್ಯವಸ್ಥೆಯಲ್ಲಿ ಕ್ಲಾಸ್ ನಡೆಸಬಹುದು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆ, ಶುಚಿತ್ವ ಕಾಪಾಡಲು ಅಗತ್ಯ ಕ್ರಮ. ಎಲ್ಲಾ ಕಾಲೇಜುಗಳು ಸಮೀಪದ ಆಸ್ಪತ್ರೆಯೊಂದಿಗೆ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಪ್ರತಿ ಕಾಲೇಜಿನಲ್ಲಿ ಕೋವಿಡ್ ಕಾರ್ಯಪಡೆ ನೇಮಕ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣ ಇದ್ರೆ ಕಾರ್ಯಪಡೆಯ ಗಮನಕ್ಕೆ ತರಬೇಕು.
ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟ, ಕುಡಿಯುವ ನೀರು ತರಬೇಕು. ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಾಲೇಜು ಐಡಿ ಧರಿಸುವುದು ಕಡ್ಡಾಯ. ಆನ್ಲೈನ್ ಕ್ಲಾಸ್ ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಕಾಂಟ್ಯಾಕ್ಟ್ ಕ್ಲಾಸ್ ನಡೆಸಬಹುದು. ಸಂಪರ್ಕ ತರಗತಿ ನಡೆಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲಿಸಲೇಬೇಕು. ಎನ್ಎಸ್ಎಸ್ ಹಾಗೂ ಎನ್ಸಿಸಿ ಚಟುವಟಿಕೆಗಳ ಪ್ರಾರಂಭಕ್ಕೂ ಅನುಮತಿ ನೀಡಲಾಗಿದೆ.