ಚಂಡೀಗಢ: 11 ವರ್ಷದ ಚಂಡೀಗಢದ ದುರ್ಗ ಜಿಲ್ಲೆಯ ಬಾಲಕನಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. 5ನೇ ತರಗತಿಯಲ್ಲಿ ಓದುತ್ತಿರುವ ಲಿವ್‍ಜೋತ್ ಸಿಂಗ್ ಅರೋರಾ ಎಂಬ ಬಾಲಕನ ಬುದ್ಧಿವಂತಿಕೆಯ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಸಮ್ಮತಿ ಸೂಚಿಸಿದೆ ಎಂದು ಮಂಗಳವಾರ ರಾಜ್ಯ ಜನಸಂಪರ್ಕ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ಬಹುಶಃ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ 10ನೇ ತರಗತಿ ಪರೀಕ್ಷಾ ಮಂಡಳಿ 12 ವರ್ಷದ ಬಾಲಕನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಈ ಮುನ್ನ ಲಿವ್‍ಜೋತ್ 2020-2021ರ ಸಾಲಿನ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರಿ ಸಿಜಿಬಿಎಸ್‍ಇಗೆ ಅರ್ಜಿ ಸಲ್ಲಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ಗ್ ಜಿಲ್ಲಾಸ್ಪತ್ರೆಯಲ್ಲಿ ಬಾಲಕನ ಐಕ್ಯೂ ಪರೀಕ್ಷೆಯನ್ನು ನಡೆಸಲಾಗಿತ್ತು. ವರದಿಯಲ್ಲಿ ಬಾಲಕ ಐಕ್ಯೂ 16ರ ವಯಸ್ಕರರ ಐಕ್ಯೂಗೆ ಸಮನಾಗಿದೆ ಎಂದು ತಿಳಿದುಬಂದಿದೆ. ಐಕ್ಯೂ ಎಂದರೇ ಮನುಷ್ಯರ ಬುದ್ದಿವಂತಿಕೆ ಪ್ರಮಾಣವನ್ನು ನಿರ್ಣಯಿಸಲು ವಿನ್ಯಾಸಗೊಳಿಸಿರುವ ಪ್ರಮಾಣೀಕೃತ ಪರೀಕ್ಷೆಯ ಗುಂಪಿನಿಂದ ಪಡೆದ ಅಂಕಗಳಾಗಿದೆ.
ಲಿವ್‍ಜಿತ್ ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಅಂಕಗಳ ಮತ್ತು ಆತನ ಐಕ್ಯೂ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು ಬಾಲಕನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.
ಈ ಕುರಿತಂತೆ ಬಾಲಕನ ತಂದೆ ಗುರುವಿಂದರ್ ಸಿಂಗ್ ಅರೋರಾ ತಮ್ಮ ಮಗ ಬಿಹಾಲಿಯ ಮಿಲ್‍ಸ್ಟೋನ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಗೆ ಬೇಕಾದ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾನೆ. ಜೊತೆಗೆ ಪರೀಕ್ಷೆ ಬರೆಯಲು ಬಹಳ ಉತ್ಸುಹಕನಾಗಿದ್ದಾನೆ ಎಂದು ಹೇಳಿದ್ದಾರೆ.
ಲಿವ್‍ಜೀತ್ ಮೊದಲಿನಿಂದಲೂ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದು, 3ನೇ ತರಗತಿಯಲ್ಲಿದ್ದಾಗಲೇ ಆತ ಗಣಿತದ ಲೆಕ್ಕ ಸಮಸ್ಯೆಯನ್ನು ಕೇವಲ ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತಿದ್ದನು. ಇದೀಗ ಚಿಕ್ಕವಯಸ್ಸಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದು ನಮಗೆ ಬಹಳ ಖುಷಿತರಿಸಿದೆ. ನಾವು ಕೂಡ ಆತನ ಮೇಲೆ ಯಾವುದೇ ಒತ್ತಡ ನೀಡದೇ ಅವನ್ನು ತಯಾರಿ ನಡೆಸಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.