ನವದೆಹಲಿ: ಪಕ್ಕದ ಮನೆಗೆ ಆಟವಾಡಲೆಂದು ಹೋಗಿದ್ದ 1 ವರ್ಷದ ಬಾಲಕಿ ಮೇಲೆ 33 ವರ್ಷದ ವ್ಯಕ್ತಿ ಆತನ ಮಕ್ಕಳ ಮುಂದೆಯೇ ಅತ್ಯಾಚಾರ ನಡೆಸಿರೋ ಆಘಾತಕಾರಿ ಘಟನೆ ಬುಧವಾರದಂದು ದೆಹಲಿಯಲ್ಲಿ ನಡೆದಿದೆ.
ಪಕ್ಕದ ಮನೆಯಲ್ಲಿ ವಾಸವಿದ್ದ 4 ವರ್ಷದ ಬಾಲಕ ಹಾಗೂ 2 ವರ್ಷದ ಬಾಲಕಿಯೊಂದಿಗೆ ಆಟವಾಡಲೆಂದು ಬಾಲಕಿ ಹೋಗಿದ್ದಳು. ಈ ವೇಳೆ ಆ ಮಕ್ಕಳ ತಾಯಿ ಟೆರೆಸ್ ಮೇಲೆ ಏನೋ ಕೆಲಸ ಮಾಡುತ್ತಿದ್ದರು. ಇತ್ತ ಮನೆಯ ರೂಮಿನಲ್ಲಿ ಆರೋಪಿ ಬಾಲಕಿಯ ಮೇಲೆ ತನ್ನ ಮಕ್ಕಳ ಮುಂದೆಯೇ ಅತ್ಯಾಚಾರ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
Advertisement
ಬಾಲಕಿ ಮನೆಗೆ ಹಿಂದಿರುಗಿದ ನಂತರ ಆಕೆಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ತಾಯಿ ನೋಡಿದ್ದರು. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಯಿತು ಎಂದು ಅವರು ತಿಳಿಸಿದ್ದಾರೆ.
Advertisement
Advertisement
ನಂತರ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಾಯಿ ತನ್ನ ಗಂಡನಿಂದ ದೂರವಾಗಿದ್ದು, ದೆಹಲಿಯಲ್ಲಿ ತಾಯಿ ಮನೆಯಲ್ಲಿ ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆಯನ್ನು ಭೇಟಿಯಾಗುವುದಾಗಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ಕರೆಯಬೇಕೆಂದು ಸ್ವಾತಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯ ಗಮನ ಬೇರೆಡೆ ಸೆಳೆದು 80 ಸಾವಿರ ರೂ. ಕದ್ದೇ ಬಿಟ್ಟ ಬಾಲಕ! https://t.co/VDScs39FTz#Chikkodi #Theft #Cash #Police pic.twitter.com/6KswmBPQHV
— PublicTV (@publictvnews) November 2, 2017
ಪ್ರೀತಿ ನಿರಾಕರಿಸಿದ್ದಕ್ಕೆ ಹಾಡಹಗಲೇ ಯುವತಿಯ ಮೇಲೆ ಖಾರದ ಪುಡಿ ಎಸೆದು, ಕೊಚ್ಚಿ ಕೊಲೆ ಮಾಡ್ದ.. https://t.co/7xgInnDd5U#Hassan #Murder #Love #Police pic.twitter.com/2SFnPMZ01i
— PublicTV (@publictvnews) November 1, 2017