ಬೀಜಿಂಗ್: ಒಂದು ವರ್ಷದ ಮಗು ನೈಲ್ ಕಟ್ಟರ್ ನನ್ನು ನುಂಗಿದ್ದ ಘಟನೆ ಈಶಾನ್ಯ ಚೀನಾದ ಚಂಗ್ ಚುನ್ ನಲ್ಲಿ ನಡೆದಿದೆ.
ಈ ಘಟನೆ ಏಪ್ರಿಲ್ 17 ರಂದು ನಡೆದಿದ್ದು, ಸದ್ಯಕ್ಕೆ ಮಗುವಿನ ಹೊಟ್ಟೆಯೊಳಗಿದ್ದ ನೈಲ್ ಕಟ್ಟರ್ ಅನ್ನು ಹೊರ ತೆಗೆಯಲಾಗಿದೆ. ನಾನು ಉಪಯೋಗಿಸಿದ್ದ ನೈಲ್ ಕಟ್ಟರ್ ಅನ್ನು 16 ತಿಂಗಳ ಮಗ ತೆಗೆದುಕೊಂಡು ಮನೆಯ ಸುತ್ತಾ ಓಡಾಡುತ್ತಿದ್ದನು. ಅದನ್ನು ನೋಡಿದ ಕೂಡಲೇ ನಾನು ಆತನನ್ನು ಹಿಡಿಯಲು ಮನೆಯಲ್ಲೆಲ್ಲಾ ಓಡಾಡಿದೆ. ಆದರೆ ಅವನು ಇದನ್ನು ಆಟವೆಂದು ಭಾವಿಸಿ ನೈಲ್ ಕಟ್ಟರ್ ನುಂಗಿಬಿಟ್ಟಿದ್ದಾನೆ ಎಂದು ತಾಯಿ ತಿಳಿಸಿದ್ದಾರೆ.
Advertisement
ಮಗು ನೈಲ್ ಕಟ್ಟರ್ ನುಂಗಿದ ತಕ್ಷಣವೇ ನಗರದ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ವೈದ್ಯರು ಎಂಡೋಸ್ಕೋಪಿ ಮೂಲಕ ಮಗುವಿನ ಹೊಟ್ಟೆಯೊಳಗೆ ಸೇರಿದ್ದ 2.4 ಇಂಚಿನ ನೈಲ್ ಕಟರ್ ನ್ನು ಹೊರ ತೆಗೆದಿದ್ದಾರೆ. ಸದ್ಯಕ್ಕೆ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿ ಮನೆಗೆ ಹಿಂದಿರುಗಿದೆ.
Advertisement