ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬಂದ ಕಲ್ಕಿ 2898ಎಡಿ (Kalki 2898 AD) ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳಿಪಟ ಎಬ್ಬಿಸಿತ್ತು. ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone), ಅಮಿತಾಬ್ ಬಚ್ಚನ್ (Amitabh Bachchan) ಮುಂತಾದವರು ಸೇರಿದಂತೆ ಅತಿದೊಡ್ಡ ತಾರಾಗಣದಲ್ಲಿ ತೆರೆಕಂಡಿದ್ದ ಕಲ್ಕಿ ಸಿನಿಮಾಗೆ ಒಂದು ವರ್ಷದ ಸಂಭ್ರಮ. ಹೌದು, 2025ರ ಜೂನ್ 27ರಂದು ಸಿನಿಮಾ ಜಗತ್ತಿನಾದ್ಯಂತ ತೆರೆಕಂಡು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು.
ಕಲ್ಕಿ ಸಿನಿಮಾ ಬಳಿಕ ನಾಗ್ ಅಶ್ವಿನ್ ಪಾರ್ಟ್-2 ಸಿನಿಮಾವನ್ನ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಗ್ಗೆ ಫಸ್ಟ್ ಪಾರ್ಟ್ ಶೂಟಿಂಗ್ ನಡೆಯುತ್ತಿರುವಾಗಲೇ ಒಂದು ಸುತ್ತಿನ ಮಾತುಕತೆಯಾಗಿತ್ತು ಎನ್ನಲಾಗ್ತಿದೆ. ಕಲ್ಕಿ ಚಿತ್ರ ತೆರೆಗಪ್ಪಳಿಸಿ ಒಂದುವರ್ಷವಾದ ಸಂಭ್ರಮದಲ್ಲಿ ವೈಜಯಂತಿ ಮೂವಿಸ್ ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದೆ. ಅದೇ ಪೋಸ್ಟ್ನ್ನು ಬಿಗ್ಬಿ ಅಮಿತಾಬ್ ಬಚ್ಚನ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಮಾದಕ ಲುಕ್ನಲ್ಲಿ ಸಪ್ತಮಿ ಶೈನ್ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು
ಅಲ್ಲದೇ ಮತ್ತೆ ಸಿನಿಮಾ ಮಾಡಿದ್ರೆ, ವೈಜಯಂತಿ ಪ್ರೊಡಕ್ಷನ್ ಆ ಸಿನಿಮಾಗಾಗಿ ಕೇಳಿದ್ರೆ ನಾನು ಅದರ ಒಂದು ಭಾಗವಾಗುವುದಕ್ಕೆ ಸದಾ ಕಾಯುತ್ತಿರುವೆ ಎಂದು ಬಾಲಿವುಡ್ ಬಿಗ್ಬಿ ಅಮಿತಾಬ್ ಬಚ್ಚನ್ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಜೆಟ್ನಲ್ಲಿ ಮೂಡಿಬಂದಿದ್ದ ಕಲ್ಕಿ ಸಿನಿಮಾ ಪಾರ್ಟ್-2 ಬರೋಕೆ ಕೆಲವು ಹಿಂಟ್ ಸಿಗುತ್ತಿವೆ. ಇತ್ತ ಪ್ರಭಾಸ್ ಸ್ಪಿರಿಟ್ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಅದಾದ ಬಳಿಕ ಕಲ್ಕಿ ಪಾರ್ಟ್-2 ಸಿನಿಮಾಗೆ ಮುಹೂರ್ತ ಇಡಬಹುದು ಎನ್ನಲಾಗ್ತಿದೆ. ಇದನ್ನೂ ಓದಿ: ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು