ಇಂಧೋರ್: ಸಾಮಾನ್ಯವಾಗಿ ರೈತರು ಬೆಳೆಯುವ ಮಾವಿನ ಹಣ್ಣುಗಳು 100 ರಿಂದ 300 ಗ್ರಾಂ ಇರುತ್ತವೆ. ಹೆಚ್ಚೆಂದರೆ 500 ಗ್ರಾಂ ಬರಬಹುದು. ಆದರೆ, ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ಬೆಳೆಯುವ ಮಾವಿನ ಹಣ್ಣು ಬರೋಬ್ಬರಿ 4 ಕೆಜಿ ವರೆಗೂ ಬರಲಿದ್ದು, ತಿಂಗಳಿಗೆ ಮುಂಚೆಯೇ ಬುಕ್ಕಿಂಗ್ ಶುರುವಾಗಿದೆ.
ಮಧ್ಯಪ್ರದೇಶದ ಕಥ್ಥಿವಾಡ ಪ್ರದೇಶದಲ್ಲಿ ಬೆಳೆಯಲಾಗುವ ಈ ವಿಶೇಷ ತಳಿಯ ಮಾವಿನ ಹಣ್ಣು ಗರಿಷ್ಠ 4 ಕೆಜಿ ವರೆಗೂ ಇರಲಿದೆ. ಅತ್ಯಂತ ಸಿಹಿಯಾಗಿರುವ ಈ ಮಾವಿನ ಹಣ್ಣು ಗಾತ್ರದಷ್ಟೇ ದುಬಾರಿ ದರವೂ ಹೊಂದಿದ್ದು, 1 ರಿಂದ 2 ಸಾವಿರ ರೂ. ವರೆಗೆ ಮಾರಾಟವಾಗುತ್ತದೆ. ಇದನ್ನೂ ಓದಿ: ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವಕ್ಕೆ ಬ್ರೇಕ್ – ನಿರ್ಬಂಧ ಹೇರಿದ್ರೆ ನಾನೇ ಪಲ್ಲಕ್ಕಿ ಹೊರುತ್ತೇನೆಂದ ಅಣ್ಣಾಮಲೈ
Advertisement
Advertisement
ಹೌದು ಅಫ್ಘಾನಿಸ್ತಾನ ಮೂಲದ ನೂರ್‌ಜಹಾನ್ ಎಂಬ ಮಾವಿನ ತಳಿಯ ಹಣ್ಣು 1 ಅಡಿ ಉದ್ದ ಮತ್ತು 4 ಕೆಜಿ ತೂಕವಿರಲಿದೆ. ಜನವರಿ-ಫೆಬ್ರವರಿ ವೇಳೆ ಈ ಮರಗಳಲ್ಲಿ ಹೂವು ಬಿಡಲು ಪ್ರಾರಂಭವಾಗುತ್ತವೆ. ಜೂನ್ ಮೊದಲ ವಾರದ ವರೆಗೆ ಹಣ್ಣು ಬಲಿತು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತವೆ. ಆದರೆ, ದುಬಾರಿ ಹವಾಮಾನ ವೈಪರಿತ್ಯದಿಂದಾಗಿ ಮರಗಳಲ್ಲಿ ಈ ಬಾರಿ ಕಾಯಿ ಕಡಿಮೆಯಾಗಿದೆ. ಹಣ್ಣಾಗುವ ಮೊದಲೇ ಹೂವು ಉದುರಿಹೋಗಿದ್ದು, ಮೂರೇ ಮರಗಳಲ್ಲಿನ 250 ಕಾಯಿಗಳು ಉಳಿದಿವೆ. ಇದನ್ನೂ ಓದಿ: ನೀವು ಮಮತಾ ಬ್ಯಾನರ್ಜಿ ಏಜೆಂಟ್, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್ ಮುಖಂಡರು, ವಕೀಲರ ಆಕ್ರೋಶ
Advertisement
ಕಳೆದ ವರ್ಷ ಪ್ರತಿ ಹಣ್ಣನ್ನು 500 ರಿಂದ 1,500ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವರ್ಷ 2 ಸಾವಿರ ರೂ. ವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಜೂನ್ ತಿಂಗಳ ವೇಳೆ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಇದಕ್ಕೆ ಆಕರ್ಷಿತರಾಗಿರುವ ಮಾವು ಪ್ರಿಯರು ತಿಂಗಳಿಗೆ ಮುಂಚಿತವಾಗಿಗೆ ಬುಕ್ಕಿಂಗ್ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಮಾವು ಬೆಳೆಗಾರ ಶಿವರಾಜ್ ಸಿಂಗ್ ಜಾದವ್ ಹೇಳಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿವೆ.