ರಾಮನಗರ: ರಾಜ್ಯದ 136 ಜನ ಶಾಸಕರಿಗೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಅಭಿವೃದ್ಧಿಗೆ, ಈಗ ಚನ್ನಪಟ್ಟಣದ (Channapatna) ಅಭಿವೃದ್ಧಿಗೆ 500 ಕೋಟಿ ರೂ. ಎಲ್ಲಿಂದ ತರ್ತಾರೆ ಎಂದು ಜೆಡಿಎಸ್ (JDS) ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರಶ್ನೆ ಮಾಡಿದ್ದಾರೆ.
ಚನ್ನಪಟ್ಟಣ ಅಭಿವೃದ್ಧಿಗೆ ಕಾಂಗ್ರೆಸ್ (Congress) 500 ಕೋಟಿ ಅನುದಾನ ಕೊಟ್ಟಿದ್ದೇವೆ ಎಂಬ ವಿಚಾರ ಕುರಿತು ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಅಭಿವೃದ್ಧಿಗೆ ತಂದಿರುವ 500 ಕೋಟಿ ಯಾವುದಕ್ಕೆ ಕೊಡ್ತಾರೆ? ಎಲ್ಲಿಗೆ ಕೊಡ್ತೀರಾ? ಎಂದು ಜನರ ಮುಂದೆ ಇಡಿ ಎಂದು ಆಗ್ರಹಿಸಿದರು.ಇದನ್ನೂ ಓದಿ: BBK 11: 1 ಲಕ್ಷಕ್ಕೂ ಅಧಿಕ ವೋಟ್ ಗಳಿಸಿ ದೊಡ್ಮನೆ ಸ್ವರ್ಗಕ್ಕೆ ಕಾಲಿಟ್ಟ ಗೌತಮಿ
Advertisement
Advertisement
ರಾಜ್ಯದ 136 ಜನ ಶಾಸಕರಿಗೆ ಒಂದು ರೂ. ಅನುದಾನ ಕೊಟ್ಟಿಲ್ಲ ಅಭಿವೃದ್ಧಿಗೆ, ಈಗ 500 ಕೋಟಿ ಎಲ್ಲಿಂದ ತರುತ್ತಾರೆ. ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷ ಐದು ತಿಂಗಳು ಆಯ್ತು, ಚನ್ನಪಟ್ಟಣ ತಾಲ್ಲೂಕು ಎಲ್ಲಿದೆ ಅಂತ ಕಾಂಗ್ರೆಸ್ ನಾಯಕರಿಗೆ ಗೊತ್ತಿರಲಿಲ್ಲ. ಈಗ ಕುಮಾರಣ್ಣ (HD Kumaraswamy) ಕೇಂದ್ರ ಸ್ವ ಕ್ಷೇತ್ರ ತೆರವು ಆದ ಮೇಲೆ ಕಾಂಗ್ರೆಸ್‌ನವರು ಕ್ಷೇತ್ರದ ಮೇಲೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಇನ್ನೂ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಜನತಾದಳ ಪಕ್ಷದ ಕಡೆಯಿಂದ ಯಾವುದೇ ಗೊಂದಲ ಆಗುವುದಿಲ್ಲ. ನಾವು ಅದಕ್ಕೆ ಆಸ್ಪದ ಕೊಡುವ ಪ್ರಶ್ನೆಯೇ ಇಲ್ಲ. ಜೊತೆಯಲ್ಲಿ ಸಿಪಿ ಯೋಗೇಶ್ವರ್ ಅವರ ಬೆಂಬಲಿಗರಿಗೆ ಎನ್‌ಡಿಎ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಎಂದು ಸಲಹೆ ಮತ್ತು ಸೂಚನೆ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ. ಜನ ಆಶೀರ್ವಾದ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಒಂದು ಕಡೆ ಜನಪ್ರತಿನಿಧಿಗಳು, ಮತ್ತೊಂದು ಕಡೆ ಅಧಿಕಾರಿಗಳು ಯಾವ ರೀತಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಕುಮಾರಣ್ಣ ನೇರವಾಗಿ ಮಾತನಾಡುತ್ತಾರೆ. ಕೆಲವೊಂದು ವಿಷಯಗಳನ್ನ ರಾಜ್ಯ ಸರ್ಕಾರ ಜೀರ್ಣಸಿಕೊಳ್ಳುವುದಿಲ್ಲ. ಅದಕ್ಕೆ ಎಜಿಡಿಪಿ ಕಡೆಯಿಂದ ಪತ್ರ ಬಂದಿರುವುದು. ಇದು ಅವರ ಹುದ್ದೆಗೆ ಶೋಭೆ ತರುವುದಿಲ್ಲ, ಇದನ್ನ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ, ಸಾಕಷ್ಟು ಜನ ಕಾನೂನು ಸಲಹೆಗಾರರು, ಕಾನೂನು ತಜ್ಞರು, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು, ಮಂತ್ರಿ ಮಂಡಲದ ಜೊತೆ ಇದ್ದಾರೆ. ಒಂದಷ್ಟು ಪತ್ರಗಳನ್ನ ಬರೆಸಿ, ಅವರ ಮೂಲಕ ಸಹಿ ಮಾಡಿಸಿ ರಾಜ್ಯಕ್ಕೆ ಸಂದೇಶಕೊಡಿಸುವಂತ ಕೆಲಸ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು : ಮಂಜುನಾಥ ಸಾವಂತ