ನವದೆಹಲಿ: ಇತ್ತೀಚಿನ ಮಕ್ಕಳಿಗೆ ಒಂದು ರೂಪಾಯಿ ಕೊಟ್ಟರೆ ನಮಗೆ ಬೇಡ. ಇದರಲ್ಲಿ ಏನು ಸಿಗುತ್ತೆ ಅಂತಾ ಪ್ರಶ್ನೆ ಮಾಡುತ್ತಾರೆ. ಅಷ್ಟೇ ಅಲ್ಲ ಒಂದು ರೂ. ಮುಖಬೆಲೆಯ ನಾಣ್ಯ ಮುದ್ರಣ ಮಾಡೋದಕ್ಕೆ ಸರ್ಕಾರ ಕೂಡ ಅದಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಬೇಕಾಗುತ್ತದೆ.
ಹೌದು, 1.ರೂ ಟಂಕಿಸಲು ಸರ್ಕಾರ 1.11 ರೂ. ವೆಚ್ಚ ಮಾಡಬೇಕಾಗಿದೆ. ನಾಣ್ಯಗಳನ್ನು ಟಂಕಿಸಲು ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರ ಎಲ್ಲ ರೀತಿಯ ಮುಖ ಬೆಲೆಯ ನಾಣ್ಯಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎನ್ನುವ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
Advertisement
Advertisement
ಯಾವ ನಾಣ್ಯಕ್ಕೆ ಎಷ್ಟು ವೆಚ್ಚ?:
1, 2, 5 ಹಾಗೂ 10 ರೂ. ಮುಖಬೆಲೆಯ ನಾಣ್ಯಗಳನ್ನು ಟಂಕಿಸಿ ಮಾರುಕಟ್ಟೆಗೆ ಬಿಡುಗಡೆಮಾಡುವ ಕೆಲಸವನ್ನು ಆರ್‌ಬಿಐ ಮಾಡುತ್ತಿದೆ. 2ರೂ. ನಾಣ್ಯಕ್ಕೆ 1.20 ರೂ., 5 ರೂ. ನಾಣ್ಯಕ್ಕೆ 3.69 ರೂ., ಮತ್ತು 10 ರೂ. ನಾಣ್ಯಕ್ಕೆ 5.54 ರೂ. ವೆಚ್ಚ ಮಾಡಬೇಕಾಗುತ್ತದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv