ಶಿವಮೊಗ್ಗ: ಅಬಕಾರಿ ಇಲಾಖೆಯಲ್ಲಿ ಕಳೆದ 13 ವರ್ಷದಿಂದ ದಾಸ್ತಾನು ಮಾಡಲಾಗಿದ್ದ ಒಂದು ಕ್ವಿಂಟಾಲ್‍ಗೂ ಅಧಿಕ ಒಣ ಗಾಂಜಾ ಗಿಡಗಳನ್ನು ಇಲಾಖೆ ನಾಶಪಡಿಸಿದೆ.
ಮಾದಕ ವಸ್ತು ಸಾಮಾಗ್ರಿಗಳ ವಿಲೇವಾರಿ ಸಮಿತಿ ಶಿಫಾರಸು ಅನ್ವಯ ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಶುಶೃತ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಗಾಂಜಾ ಗಿಡಗಳನ್ನು ನಾಶಪಡಿಸಲಾಯಿತು.
Advertisement
Advertisement
ಶಿವಮೊಗ್ಗ ಅಬಕಾರಿ ಇಲಾಖೆಯಲ್ಲಿ 2007ರಿಂದ ಇಲ್ಲಿಯವರೆಗೆ ಒಟ್ಟು 56 ಪ್ರಕರಣಗಳಲ್ಲಿ 1,07,835 ಕೆ.ಜಿ ತೂಕದ 11,358 ಗಿಡಗಳನ್ನು ವಶಪಡಿಸಿಕೊಂಡು ಇಲಾಖೆಯ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು.
Advertisement
ಮಾದಕ ಸಾಮಾಗ್ರಿಗಳ ವಿಲೇವಾರಿ ಸಮಿತಿ ನಿರ್ಧಾರದಂತೆ ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ಆಯುಕ್ತರಾದ ಶೈಲಜಾ ಎ.ಕೋಟೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯಕ್ತ ವೈ.ಆರ್ ಮೋಹನ್ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ನಾಶಪಡಿಸಲಾಯಿತು.