T20 ವಿಶ್ವಕಪ್‍ಗೆ ಮಳೆ ಕಾಟ – ಗ್ರೂಪ್ 1ರ ತಂಡಗಳ ಸೆಮಿಫೈನಲ್ ಲೆಕ್ಕಾಚಾರ ಅತಂತ್ರ

Public TV
2 Min Read
T20 WORLD CUP 5

ಸಿಡ್ನಿ: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಟಿ20 ವಿಶ್ವಕಪ್‍ಗೆ (T20 World Cup) ಮಳೆರಾಯ (Rain) ಕಾಟ ಕೊಡುತ್ತಿದ್ದಾನೆ. ಈಗಾಗಲೇ ಮಳೆಯಿಂದಾಗಿ ಹಲವು ಪಂದ್ಯಗಳು ಒಂದು ಎಸೆತವನ್ನು ಕಾಣದೆ ರದ್ದುಗೊಂಡಿದೆ. ಇದರಿಂದ ಗ್ರೂಪ್ 1ರ ತಂಡಗಳ ಸೆಮಿಫೈನಲ್ (Semi-Final)  ಲೆಕ್ಕಾಚಾರ ತಲೆಕೆಳಗಾಗಿದೆ.

T20 WORLD CUP 2 1

ಇಂದು ಗ್ರೂಪ್ 1ರ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದೆ. ಇದರಿಂದ ಸೆಮಿಫೈನಲ್ ಹಾದಿ ಕೂಡ ಈ ತಂಡಗಳಿಗೆ ದುರ್ಗಮವಾಗಿದೆ. ಸೆಮಿಫೈನಲ್ ನಿಟ್ಟಿನಲ್ಲಿ 4 ತಂಡಗಳಿಗೂ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿತ್ತು. ಆದರೆ ಇಲ್ಲಿ ವರುಣ ಆಟಕ್ಕೆ ಅವಕಾಶ ಕೊಡದೆ ನಿರಾಸೆ ಮೂಡಿಸಿದ್ದಾನೆ. ಇದನ್ನೂ ಓದಿ:  ಸೆಮಿಫೈನಲ್ ನಂತರ ಭಾರತ ಕೂಡ ಮನೆಗೆ – ಶೋಯೆಬ್ ಅಖ್ತರ್

T20 WORLD CUP 4 1

ಮಳೆಯಿಂದಾಗಿ ಕೆಲ ಪಂದ್ಯ ರದ್ದುಗೊಂಡಿರುವ ಕಾರಣ ಗ್ರೂಪ್ 1ರ 6 ತಂಡಗಳಿಗೂ ಹೊಡೆತಬಿದ್ದಿದೆ. ಈ ಪೈಕಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಹೆಚ್ಚಿನ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಜೊತೆಗೆ ಆಸ್ಟ್ರೇಲಿಯಾ ತಂಡದ ರನ್‍ರೇಟ್ (Run Rate) ಕೂಡ ಪಾತಾಳಕ್ಕಿಳಿದಿದೆ. ಹಾಗಾಗಿ ಸೆಮಿಫೈನಲ್ ಹಾದಿ ಆಸ್ಟ್ರೇಲಿಯಾ ತಂಡಕ್ಕೆ ದುರ್ಗಮವಾಗಿದೆ. ಇದನ್ನೂ ಓದಿ: ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

T20 WORLD CUP 1 1

ಪಾಯಿಂಟ್ ಟೇಬಲ್:
ಇದೀಗ ಗ್ರೂಪ್ 1ರಲ್ಲಿ ಸೆಮಿಫೈನಲ್ ರೇಸ್‍ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮುಂದಿದೆ. ಆದರೆ ಇಂಗ್ಲೆಂಡ್ ತಂಡ ರನ್‍ರೇಟ್‍ನಲ್ಲಿ ಹಿಂದೆ ಬಿದ್ದಿದೆ. ಹಾಗಾಗಿ ಉಳಿದ ಪಂದ್ಯಗಳು ಪ್ರತಿಯೊಂದು ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ 3 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 3 ಅಂಕಗಳೊಂದಿಗೆ ಇಂಗ್ಲೆಂಡ್, ಐರ್ಲೆಂಡ್, ಆಸ್ಟ್ರೇಲಿಯಾ ಕ್ರಮವಾಗಿ ಎರಡು, ಮೂರು, ನಾಲ್ಕನೇ ಸ್ಥಾನ ಪಡೆದಿದೆ. ಶ್ರೀಲಂಕಾ 2 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

T20 WORLD CUP 3 1

ರನ್‍ರೇಟ್
ನ್ಯೂಜಿಲೆಂಡ್ ತಂಡ 4.450 ರನ್‍ರೇಟ್‍ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 0.239 ರನ್‍ರೇಟ್‍ನೊಂದಿಗೆ 2ನೇ ಸ್ಥಾನದಲ್ಲಿದೆ. ಐರ್ಲೆಂಡ್ -1.169 ಮತ್ತು ಆಸ್ಟ್ರೇಲಿಯಾ -1.555 ರನ್‍ರೇಟ್‍ನೊಂದಿಗೆ ನಂತರದ ಸ್ಥಾನದಲ್ಲಿದೆ. ಶ್ರೀಲಂಕಾ 0.450 ಉತ್ತಮ ರನ್‍ರೇಟ್‍ನೊಂದಿಗೆ 5ನೇ ಸ್ಥಾನ ಪಡೆದರೆ, ಅಫ್ಘಾನಿಸ್ತಾನ -0.620 ರನ್‍ರೇಟ್ ಪಡೆದು 6ನೇ ಸ್ಥಾನ ಪಡೆದುಕೊಂಡಿದೆ.  ಇದನ್ನೂ ಓದಿ: ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

T20 WORLD CUP 5 1

ಹಾಗಾಗಿ ಮುಂದಿನ ಪಂದ್ಯಗಳು ಪ್ರತಿ ತಂಡಕ್ಕೂ ಡೂ ಆರ್ ಡೈ ಪಂದ್ಯಗಳಾಗಿರುತ್ತವೆ. ನ್ಯೂಜಿಲೆಂಡ್ ಮುಂದಿನ ಎರಡು ಪಂದ್ಯಗಳ ಪೈಕಿ ಶ್ರೀಲಂಕಾ, ಇಂಗ್ಲೆಂಡ್ ಮತ್ತು ಐರ್ಲೆಂಡ್‌ನ್ನು ಎದುರಿಸಲಿದೆ. ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡ, ಐರ್ಲೆಂಡ್‌ ಮತ್ತು ಅಫ್ಘಾನಿಸ್ತಾನ ವಿರುದ್ಧ ಹೋರಾಡಲಿದೆ. ಐರ್ಲೆಂಡ್‌ ತಂಡ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಶ್ರೀಲಂಕಾ ತಂಡ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಕಾದಾಡಲಿದೆ. ಅಫ್ಘಾನಿಸ್ತಾನ ತಂಡ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಕೊನೆಯ 2 ಪಂದ್ಯಗಳನ್ನು ಆಡಲಿದೆ.

ಈ ಪೈಕಿ ಆಸ್ಟ್ರೇಲಿಯಾ ತಂಡದ ಸ್ಥಿತಿ ತುಂಬಾ ಶೋಚನೀಯವಾಗಿದೆ. ನ್ಯೂಜಿಲೆಂಡ್ ಮುಂದಿನ 2 ಪಂದ್ಯಗಳನ್ನು ಗೆದ್ದರೆ, ಸೆಮಿಫೈನಲ್‍ಗೇರಬಹುದು. ಇಂಗ್ಲೆಂಡ್ ಮುಂದಿನ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ರನ್‍ರೇಟ್ ಹೆಚ್ಚಿಸಿಕೊಳ್ಳುವ ಸಾಹಸಕ್ಕೆ ಮುಂದಾಗಬೇಕಿದೆ. ಶ್ರೀಲಂಕಾಗೆ ರನ್‍ರೇಟ್ ಕೈ ಹಿಡಿದಿದ್ದು, ಮುಂದಿನ ಪಂದ್ಯಗಳನ್ನು ಗೆದ್ದರೆ ಅವಕಾಶವಿದೆ. ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ಅಪಾಯದ ಸ್ಥಿತಿಯಲ್ಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *