ಬೆಂಗಳೂರು: ಕೊರೊನಾದಿಂದ ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟರೆ 1 ಲಕ್ಷ ಪರಿಹಾರ ಎಂಬ ಸರ್ಕಾರದ ಆದೇಶದಲ್ಲಿ ಇದೀಗ ಪರಿಷ್ಕರಣೆ ಮಾಡಲಾಗಿದೆ.
Advertisement
ಈ ಹಿಂದೆ ಕುಟುಂಬದ ದುಡಿಯುವ ಸದಸ್ಯರಾಗಿದ್ದರೇ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಹಿಂದಿನ ಆದೇಶ ಬದಲಾಯಿಸಿ ಹೊಸ ಆದೇಶ ಹೊರಡಿಸಿದೆ. ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತರಾಗಿದ್ದರೆ ಅವರ ಕುಟುಂಬಕ್ಕೆ 1 ಲಕ್ಷ ಪರಿಹಾರ ಕೊಡುವುದಾಗಿ ಹೊಸ ಆದೇಶ ಪ್ರಕಟ ಮಾಡಿದೆ.
Advertisement
Advertisement
ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗೆ ಯಾವುದೇ ವಯಸ್ಸಿನ ನಿಬಂಧನೆಯೂ ಇಲ್ಲ. ಮೃತರು ಬಿಪಿಎಲ್ ಕುಟುಂಬದ ಸದಸ್ಯರಾಗಿದ್ದರೆ, ಅವರ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ಪರಿಹಾರ ನೀಡಲಾಗುವುದು ಎಂದು ತಿದ್ದುಪಡಿ ಆದೇಶದಲ್ಲಿ ರಾಜ್ಯ ಸರ್ಕಾರ ಉಲ್ಲೇಖ ಮಾಡಿದೆ. ಇದನ್ನೂ ಓದಿ: ಪ್ರಧಾನಿಯನ್ನು ಭೇಟಿ ಮಾಡಿದ ತಕ್ಷಣ ಬಿಜೆಪಿಗೆ ಹೋಗುತ್ತೇವೆ ಎಂದಲ್ಲ: ಎಚ್.ಡಿ.ದೇವೇಗೌಡ