– ಹಾಸನದ 6 ತಾಲೂಕಿನ ಶಾಲೆಗಳಿಗೆ ರಜೆ
– 3 ದಿನಗಳ ವಿರಾಮದ ಬಳಿಕ ಕೊಡಗಿನಲ್ಲಿ ಭಾರೀ ಮಳೆ
ಮಂಡ್ಯ/ ಮಡಿಕೇರಿ/ ಹಾಸನ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕ್ಷಣ ಕ್ಷಣಕ್ಕೂ ಕೃಷ್ಣರಾಜಸಾಗರ ಜಲಾಶಯದ (KRS Dam) ಒಳಹರಿವಿನಲ್ಲಿ ಹೆಚ್ಚಳ ಕಾಣುತ್ತಿದೆ. ಕನ್ನಂಬಾಡಿ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, 1.50 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
Advertisement
3 ದಿನಗಳ ವಿರಾಮದ ಬಳಿಕ ಕೊಡಗಿನಲ್ಲಿ (Kodagu) ಜೋರು ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದೆ. ಕುಶಾಲನಗರ ತಾಲೂಕಿನ ಕಣಿವೆ ಭಾಗದಲ್ಲಿ ಹೊಲಗದ್ದೆಗಳಿಗೆ ನೀರು ನುಗ್ಗಿದೆ.
Advertisement
Advertisement
ಸೋಮವಾರಪೇಟೆ, ಭಾಗಮಂಡಲ ತಲಕಾವೇರಿ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಇದೆಲ್ಲದರ ಪರಿಣಾಮ ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ರಂಗನತಿಟ್ಟು ಪಕ್ಷಿಧಾಮ ಸೇರಿ ನದಿಪಾತ್ರದ ಪ್ರವಾಸಿ ತಾಣಗಳು ಮುಳುಗುವ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ – ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ
Advertisement
ಹಾಸನದಲ್ಲಿ (Hassana) ಮಳೆ ಜೋರಾಗಿದ್ದು ಅರಸೀಕೆರೆ, ಚನ್ನರಾಯಪಟ್ಟಣ ಬಿಟ್ಟು ಉಳಿದ 6 ತಾಲೂಕಿನ ಪ್ರೌಢಶಾಲೆವರೆಗೆ ನಾಳೆ ರಜೆ ಘೋಷಿಸಲಾಗಿದ್ದರೆ ಕಾಲೇಜ್‌ಗಳು ತೆರೆಯಲಿವೆ.
ಚಿಕ್ಕಮಗಳೂರು, ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ (Hemavathi Dam) ಒಳ ಹರಿವು ಹೆಚ್ಚಾಗಿ 65 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ನದಿ ಪಾತ್ರದಲ್ಲಿ ನಾಟಿಗೆ ಸಿದ್ಧವಾಗಿದ್ದ ಗದ್ದೆಗಳಲ್ಲಿ ನೀರು ತುಂಬಿದೆ. ಇದನ್ನೂ ಓದಿ: ಆಸ್ತಿ, ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ: ದರ್ಶನ್‌ಗೆ ಜೈಲೂಟ ಫಿಕ್ಸ್ – ಕೋರ್ಟ್ ಹೇಳಿದ್ದೇನು?
ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯ ಜಲಾವೃತವಾಗಿದೆ. ಮಳಲಿಯ ಚತುಷ್ಪಥ ಬಳಿ ಗುಡ್ಡಕುಸಿದು 5 ಮನೆಗಳಿಗೆ ಆತಂಕ ಎದುರಾಗಿದೆ. ಬೇಲೂರಿನ ಅರೇಹಳ್ಳಿ ಗ್ರಾಮದಲ್ಲಿ ಕೆರೆ ಒಡೆದು 12 ಎಕರೆಯಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗೆ ನೀರು ನುಗ್ಗಿದೆ. ಯಗಚಿ ಡ್ಯಾಮ್‌ನಿಂದ ಭರ್ತಿಯಾಗಿ ಅಪಾರ ನೀರು ಹೊರಬಿಡಲಾಗಿದೆ.