ಬೀದರ್: 1 ಕಿ.ಮೀ ಉದ್ದದ ನಾಡ ಧ್ವಜ ಮೆರವಣಿಗೆ ಮಾಡುವ ಮೂಲಕ ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.
ಜೈ ಕರ್ನಾಟಕ ಸಂಘಟನೆ ವತಿಯಿಂದ ಇಂದು ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಯೋಜಿಸಲಾಗಿತ್ತು. ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆಯವರ ನೇತೃತ್ವದಲ್ಲಿ ಈ ಉತ್ಸವ ನಡೆಯುತ್ತಿದ್ದು, ಉತ್ಸವದ ನಿಮಿತ್ಯ ಕಾರ್ಯಕ್ರಮದಲ್ಲಿ 1 ಕಿ.ಮೀ ಉದ್ದದ ನಾಡ ಧ್ವಜದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಬೀದರ್‍ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಧ್ವಜ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡದ ಕಂಪನ್ನು ಪಸರಿಸಿತು. ಶಾಲಾ ವಿದ್ಯಾರ್ಥಿಗಳು ನಾಡ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ರಸ್ತೆ ಉದ್ದಕ್ಕೂ ಮಕ್ಕಳು ಹಿಡಿದು ಹಾಗುತ್ತಿದ್ದ ನಾಡ ಧ್ವಜ, ಅದರ ಜೊತೆಗೆ ಕೋಲಾಟ, ಡೊಳ್ಳು ಕುಣಿತ, ಕನ್ನಡದ ಕುರಿತು ಗೀತೆಗಳು ಜನರ ಗಮನ ಸೆಳೆದವು.