ವಾಷಿಂಗ್ಟನ್: ಪಾರ್ಟಿ ವೇಳೆ ಗುಂಡಿನ ದಾಳಿಯಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ಮತ್ತು 17 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಹುಕ್ಕಾ ಲಾಂಜ್‍ನಲ್ಲಿ ನಡೆದಿದೆ.
ಗುಂಡಿನ ದಾಳಿಯಿಂದ ಅಲೆನ್ ಗ್ರೆಶಮ್ (20) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾಸ್ ಏಂಜಲೀಸ್, ಸಾರ್ಜೆಂಟ್‍ನ ಪೂರ್ವದ ನಗರದಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಶುಕ್ರವಾರ ತಡರಾತ್ರಿ ಸ್ಟ್ರಿಪ್ ಮಾಲ್ ಲಾಂಜ್‍ನ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿ ವ್ಯಕ್ತಿಯೊರ್ವ ಗುಂಡು ಹಾರಿಸಿರುವುದು ತಿಳಿದು ಬಂದಿರುವುದಾಗಿ ಸ್ಯಾನ್ ಬರ್ನಾರ್ಡಿನೊ ಪೊಲೀಸ್ ಅಧಿಕಾರಿ ಎಕ್ವಿನೋ ಥಾಮಸ್ ಹೇಳಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ
Advertisement
ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಅಂಬುಲೆನ್ಸ್ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ತಮ್ಮ ವಾಹನಲ್ಲಿಯೇ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್ ಆಸ್ಪತ್ರೆಯಲ್ಲಿರುವವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಇದೀಗ ಅಕ್ರಮವಾಗಿ ಬಂದೂಕು ಹೊಂದಿದ್ದ ಶಂಕೆಯ ಮೇಲೆ ಇಬ್ಬರನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
100ಕ್ಕೂ ಹೆಚ್ಚು ಮಂದಿ ಸೇರಿದ್ದ ಪಾರ್ಟಿಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಇದರಿಂದ ಬೆಚ್ಚಿಬಿದ್ದ ಜನರು ಪಾರ್ಕಿಂಗ್ ಪ್ರದೇಶಕ್ಕೆ ಬಂದಿದ್ದಾರೆ. ಆದರೂ ಬೆಂಬಿಡದೇ ಆರೋಪಿಗಳು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?