ಶ್ರೀನಗರ: ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉದಂಪುರದ ಗ್ಯಾರಿಸನ್ ಟೌನ್‍ನಲ್ಲಿ ರಸ್ತೆಬದಿಯಲ್ಲಿ ನಡೆದಿದೆ.
ಉಧಂಪುರ ಜಿಲ್ಲೆಯ ದನಾಲ್ ಜಾನು ದಲ್ಪಾಡ್‍ನ ಜುಗಲ್ ಮೃತ ವ್ಯಕ್ತಿ. ಪ್ರಾಥಮಿಕ ತನಿಖೆಯ ಪ್ರಖಾರ ಐಇಡಿ ಸ್ಫೋಟ ಎಂದು ಶಂಕಿಸಲಾಗಿದೆ. ಆದರೆ ತಜ್ಞರ ತನಿಖೆಯ ನಂತರ ಸ್ಫೋಟಕ್ಕೆ ನಿಖರ ಕಾರಣವೇನು ಏನು ಎನ್ನುವುದು ತಿಳಿಯುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದ ನಿಖರವಾದ ಕಾರಣ ಮತ್ತು ಮೂಲವನ್ನು ಕಂಡುಹಿಡಿಯಲು ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ
ಘಟನೆಯ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿ, ಉದಮ್‍ಪುರದ ತಹಸೀಲ್ದಾರ್ ಕಚೇರಿ ಬಳಿ ರೆಹ್ರಿ ಸುತ್ತ ಸ್ಫೋಟ ಸಂಭವಿಸಿದೆ. ಒಬ್ಬ ಪ್ರಾಣ ಕಳೆದುಕೊಂಡ, 13 ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಾನು ನಿಮಿಷದಿಂದ ನಿಮಿಷಕ್ಕೆ ಡಿಸಿಯಿಂದ ಮಾಹಿತಿ ಪಡೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ
Blast explosion around “Rehri” near Tehsildar office at #Udhampur. One life lost, 13 injured being moved to hospital.I am in touch with D.C Smt Indu Chib on minute to minute basis. Exact cause and origin of the blast being worked out..too early to draw any definite conclusion.
— Dr Jitendra Singh (@DrJitendraSingh) March 9, 2022
ಸಲಾಥಿಯಾ ಚೌಕ್ ಬಳಿ ಒಂದು ಸಣ್ಣ ಉದ್ಯಾನವನವಿದೆ. ಅಲ್ಲಿ ಜನರು ತಮ್ಮ ಹಳ್ಳಿಗಳಿಗೆ ಹೋಗಲು ಮಿನಿಬಸ್‍ಗಳಿಗಾಗಿ ಕಾಯುತ್ತಾರೆ. ಕೆಲವು ಕಿಯೋಸ್ಕ್‍ಗಳ ಬಳಿ ರಸ್ತೆಬದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವಕೀಲರು ಹೇಳಿದರು.