ಬಾಗಲಕೋಟೆ: 2014ಕ್ಕೂ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರದಲ್ಲಿದ್ದಾಗ 1 ಜಿಬಿ ಡೇಟಾಗೆ 300 ರೂ. ಖರ್ಚಾಗುತ್ತಿತ್ತು. ಆದ್ರೆ ಬಿಜೆಪಿ ಸರ್ಕಾರ (BJP Government) ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ 1 ಜಿಬಿ ಡೇಟಾಗೆ (Mobile Internet) ಕೇವಲ 10 ರೂ. ಖರ್ಚಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
Advertisement
ಬಾಗಲಕೋಟೆಯಲ್ಲಿಂದು ನಡೆದ ಚುನಾವಣಾ ಪರಚಾರ ಸಭೆಯಲ್ಲಿ ಮಾತನಾಡಿದ ಅವರು, 2014ಕ್ಕೂ ಮುನ್ನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಇದ್ದ ದರ ಇದ್ದಿದ್ದರೆ, ಇಂದು ಪ್ರತಿ ತಿಂಗಳ ಡೇಟಾ 4 ರಿಂದ 5 ಸಾವಿರ ರೂ. ಆಗ್ತಿತ್ತು. ಬಿಜೆಪಿ ಸರ್ಕಾರಕ್ಕೆ ಬಂದು ಎಷ್ಟು ಉಳಿತಾಯ ಆಗ್ತಿದೆ ಎಂಬುದನ್ನ ತಿಳಿದುಕೊಳ್ಳಿ. ಪ್ರತಿ ತಿಂಗಳು ಕನಿಷ್ಠ 4 ಸಾವಿರ ರೂ. ನಿಮಗೆ ಉಳಿತಾಯ ಮಾಡ್ತಿದೆ. ಇದರೊಂದಿಗೆ ಈ ಹಿಂದೆ ಮೊಬೈಲ್‌ಗಳು ವಿದೇಶಗಳಿಂದ ಬರುತ್ತಿತ್ತು. ಆದರೀಗ ಭಾರತವೇ ಮೊಬೈಲ್ ತಯಾರು ಮಾಡುವ ರಾಷ್ಟ್ರವಾಗಿದೆ ಎಂದು ಮೋದಿ ವಿವರಿಸಿದರು.
Advertisement
Advertisement
ಬಿಜೆಪಿ ಸರ್ಕಾರ 29 ಲಕ್ಷ ಕೋಟಿ ಹಣವನ್ನ ಬಡವರ ಅಕೌಂಟ್‌ಗೆ ತಲುಪಿಸಿದೆ. ಅಲ್ಲದೇ `ಆಯುಷ್ಮಾನ್ ಭಾರತ್’ ಯೋಜನೆಯಿಂದ 80 ಸಾವಿರ ಕೋಟಿ ಜನರ ದುಡ್ಡು ಉಳಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ 24 ಸಾವಿರ ಕೋಟಿ ಲೂಟಿ ಆಗ್ತಿತ್ತು. ನಾವು ಉಳಿತಾಯ ಮಾಡಿದ್ದರಿಂದ ನನಗೆ ಬೈಯುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: Manipur Violence: ಧಗ ಧಗನೆ ಹೊತ್ತಿ ಉರಿಯುತ್ತಿದ್ದ ಮಣಿಪುರ ಸಹಜ ಸ್ಥಿತಿಗೆ – ಮೂರೇ ದಿನದಲ್ಲಿ 54 ಮಂದಿ ಸಾವು
Advertisement
ಸ್ನೇಹಿತರೇ… ಸಿದ್ದರಾಮಯ್ಯ (Siddaramaiah) ಇಲ್ಲಿ 5 ವರ್ಷ ಶಾಸಕರಾಗಿದ್ದರು. ಆದರೆ ಅಭಿವೃದ್ಧಿ ಆಗಿದ್ದು ಡಬಲ್ ಎಂಜಿನ್ ಸರ್ಕಾರದಿಂದ. ರಸ್ತೆಗಳಿಗೆ ವಿದ್ಯುತ್ ದೀಪಗಳನ್ನ ಅಳವಡಿಸಿದ್ದು ಬಿಜೆಪಿ ಸರ್ಕಾರ. ಹೀಗಾಗಿ ಸಿದ್ದರಾಮಯ್ಯ ಇಲ್ಲಿಂದ ಓಡಿ ಹೋಗಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್‌ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಹಿರಂಗವಾಗಿ ಹೇಳಿದ್ರು, ಬಡವರ ಕಲ್ಯಾಣಕ್ಕಾಗಿ 100 ಪೈಸೆ ದೆಹಲಿಯಿಂದ ಬಿಡುಗಡೆಯಾದ್ರೆ, 50 ಪೈಸೆ ಬಡವರ ಕೈಗೆ ಸೇರ್ತಿದೆ ಎಂದು ಹೇಳಿದ್ದರು. ಇನ್ನುಳಿದ 50 ಪೈಸೆ ಲೂಟಿ ಆಗ್ತಿತ್ತು. ಆದ್ರೆ ಬಿಜೆಪಿ ಬಂದ ಮೇಲೆ ಇದಕ್ಕೆಲ್ಲ ಕಡಿವಾಣ ಹಾಕಿದೆ ಎಂದು ಹೇಳಿದರು. ಇದನ್ನೂ ಓದಿ: ಸಲಿಂಗ ಸಂಬಂಧ ಕಾನೂನುಬದ್ಧಗೊಳಿಸಿದರೆ ಅಸ್ವಸ್ಥತೆ ಹೆಚ್ಚಳ – RSS ಮಹಿಳಾ ಅಂಗ ಸಂಸ್ಥೆ ಕಳವಳ
ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಮೋದಿ, ಕಾಂಗ್ರೆಸ್‌ನವರು ಈಗಲೂ ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಲು ಇಚ್ಚಿಸುವುದಿಲ್ಲ. ಆದ್ರೆ ದೇಶ-ವಿದೇಶಘಲ್ಲಿ ಭಾರತದ ಮರ್ಯಾದೆ ಕಳೆಯಲು ಬಯಸುತ್ತಾರೆ ಎಂದು ಕಿಡಿ ಕಾರಿದರು.