ಬೆಂಗಳೂರು: ಕೆಎಂಎಫ್ನಿಂದ (KMF) ಒಂದು ಕೋಟಿ ಲೀಟರ್ ಹಾಲಿನ (Milk) ಸಂಗ್ರಹ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
ಸಿಎಂ ಸಿದ್ದರಾಮಯ್ಯರಿಂದ (Siddaramaiah) ಒಂದು ಕೋಟಿ ಹಾಲು ಶೇಖರಣೆ ಫಲಕಕ್ಕೆ ಬೆಲ್ ಹೊಡೆದು, ಗೋವುಗೆ ಪೂಜೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು. ಸಚಿವರಾದ ಚೆಲುವರಾಯಸ್ವಾಮಿ, ರಾಜಣ್ಣ, ಭೈರತಿ ಸುರೇಶ್, ಜಮೀರ್ ಅಹಮದ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿ ಶಾಸಕರು ಭಾಗಿಯಾಗಿದ್ದರು. ಇದನ್ನೂ ಓದಿ: ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ
Advertisement
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಜುಲೈನಲ್ಲಿ 90 ಲಕ್ಷ ಲೀಟರ್ ಪ್ರತಿ ದಿನ ಇತ್ತು. ಈ ವರ್ಷ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲು ಉತ್ಪಾದನೆ ತಲುಪಿದ್ದೇವೆ. ಇದೊಂದು ಮೈಲಿಗಲ್ಲು. KMF ಇತಿಹಾಸದಲ್ಲಿ ಮೈಲಿಗಲ್ಲು. ನಾನು ಪಶುಸಂಗೋಪನೆ ಮಂತ್ರಿ ಸ್ವಲ್ಪ ದಿನ ಆಗಿದ್ದೆ. ಆಗ ಮಿಲ್ಕ್ ಯೂನಿಯನ್ಗೆ ಡೈರಿಗಳನ್ನ ಸೇರಿಸಿದ್ದೆವು. ನಮ್ಮಲ್ಲಿ ಈಗ 15 ಯುನಿಯನ್ಗಳು ಇವೆ. 15 ಡೈರಿಗಳು ಇವೆ. ಇವು ಹಾಲು ಮಾರಾಟ ಮಾಡುತ್ತವೆ ಎಂದು ತಿಳಿಸಿದರು.
Advertisement
ಕೆಎಂಎಫ್ನ ಹಾಲಿನ ಸಂಗ್ರಹಣೆ ಒಂದು ಕೋಟಿ ಲೀಟರ್ ತಲುಪಿ ಇತಿಹಾಸ ಸೃಷ್ಟಿಸಿದ ಅಂಗವಾಗಿ ಇಂದು ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ @siddaramaiah ಅವರು ಗೋಪೂಜೆ ಸಲ್ಲಿಸಿ, ಈ ದಾಖಲೆ ಸೃಷ್ಟಿಗೆ ಕಾರಣರಾದ ನಾಡಿನ ಹೈನುಗಾರರಿಗೆ ಧನ್ಯವಾದ ತಿಳಿಸಿದರು. #ಕೆಎಂಎಫ್ #ನಂದಿನಿಹಾಲು #NandiniMilk pic.twitter.com/HE0CZI5FRE
— CM of Karnataka (@CMofKarnataka) July 2, 2024
Advertisement
ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡಿರುವುದರಿಂದ ಪ್ಯಾಕೇಟ್ಗೆ 50ml ಹಾಲು ಜಾಸ್ತಿ ಮಾಡಿ 2 ರೂ. ಹೆಚ್ಚಳ ಮಾಡಲಾಗಿದೆ. ಹೆಚ್ಚು ಉತ್ಪಾದನೆ ಆಗಿರುವ ಹಾಲನ್ನ ರೈತರಿಗೆ ಹಾಲು ಬೇಡ ಆಗೊಲ್ಲ. ಹಸು ಸಾಕೋರು ರೈತರು. ಹೀಗಾಗಿ ಹಾಲು ಬೇಡ ಅನ್ನೋದಕ್ಕೆ ಆಗೊಲ್ಲ. ರೈತರಿಗೆ ಸಹಾಯ ಮಾಡಲು 2 ರೂ. 50 ml ಕೊಟ್ಟು ಜಾಸ್ತಿ ಮಾಡಿದ್ದೇವೆ. ಹಾಲಿನ ಕ್ವಾಂಟಿಟಿ ಜಾಸ್ತಿ ಮಾಡಿ ಹಣ ಜಾಸ್ತಿ ಮಾಡಿದ್ದೇವೆ. ಇದನ್ನ ವಿಪಕ್ಷಗಳು ಅರ್ಥ ಮಾಡಿಕೊಳ್ಳದೆ ಹಾಲು ಬೆಲೆ ಜಾಸ್ತಿ ಮಾಡಿದ್ದಾರೆ ಅಂತಾ ಅಪಪ್ರಚಾರ ಮಾಡ್ತಿದ್ದಾರೆ. ಅವರು ರೈತರ ವಿರೋಧಿಗಳು ಅಂತಾ ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ನನ್ನ ಹೆಂಡತಿಗೆ ಹಂಚಿಕೆ ಆಗಿರೋ ಮುಡಾ ನಿವೇಶನ ಕಾನೂನು ಬದ್ದ: ಸಿದ್ದರಾಮಯ್ಯ
ಒಂದು ಕೋಟಿ ಲೀಟರ್ ಹಾಲು ಅಂದರೆ ಒಂದು ದಿನಕ್ಕೆ 5 ಕೋಟಿ ಪ್ರೊತ್ಸಾಹ ಧನವನ್ನ ಸರ್ಕಾರ ಕೊಡುತ್ತದೆ. ಇದನ್ನ ರೈತರಿಗೆ ಸಹಾಯ ಮಾಡೋಕೆ ಮಾಡ್ತಿದ್ದೇವೆ. ಹಿಂದೆ ನಾನೇ ರೈತರಿಗೆ 2 ರೂ. ನಿಂದ 5 ರೂ.ಗೆ ಸಹಾಯ ಧನ ಏರಿಕೆ ಮಾಡಿದ್ದೆ. ಅಶೋಕ್ಗೆ ಏನೂ ಗೊತ್ತಿಲ್ಲ. ಬೆಲೆ ಹೆಚ್ಚಳ ಅಂತಾರೆ. ನಾವು ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಹಾಲಿನ ಪ್ರಮಾಣ ಜಾಸ್ತಿ ಮಾಡಿ ಹಣ ಜಾಸ್ತಿ ಮಾಡಿದ್ದೇವೆ. ಪಕ್ಕದ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮದೇ ಕಡಿಮೆ ಇದೆ. ಬಾಕಿ ಉಳಿದಿರೋ ಹಾಲಿನ ಸಬ್ಸಿಡಿ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನೂ ಕೊಡ್ತೀವಿ. ಬಿಜೆಪಿ ಅವಧಿಯಲ್ಲಿ ಬಾಕಿ ಇದ್ದಿದ್ದು ಅದು. ನೀವು ಬಿಜೆಪಿ ಅವರನ್ನ ಪ್ರಶ್ನೆ ಮಾಡಿದ್ರಾ ಅಂತಾ ಮರು ಪ್ರಶ್ನೆ ಕೇಳಿದರು.