ದುಬೈ: ಭಾರತದ ಪರ ವಿರಾಟ್ ಕೊಹ್ಲಿ (Virat kohli) ವಿಶಿಷ್ಟ ಸಾಧನೆ ಮಾಡಿದ್ದಾರೆ. 1 ಏಕದಿನದ ವಿಶ್ವಕಪ್, 1 ಟಿ 20 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ (Team India) ತಂಡದ ಏಕೈಕ ಸದಸ್ಯ ಎಂಬ ಹೆಗ್ಗಳಿಕೆಗೆ ಕೊಹ್ಲಿ (Virat kohli) ಪಾತ್ರವಾಗಿದ್ದಾರೆ.
2011 ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಶ್ರೀಲಂಕಾವನ್ನು (Sri Lanka) ಸೋಲಿಸಿ ಎರಡನೇ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ49 ಎಸೆತಗಳಲ್ಲಿ 35 ರನ್ ಹೊಡೆದಿದ್ದರು.
Advertisement
2013 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 5 ರನ್‌ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಕೊಹ್ಲಿ43 ರನ್ ಬಾರಿಸಿದ್ದರು. ಇದನ್ನೂ ಓದಿ: ನಿವೃತ್ತಿ ವದಂತಿ ಬಗ್ಗೆ ಮೌನ ಮುರಿದ ರೋಹಿತ್ – 2027ರ ಏಕದಿನ ವಿಶ್ವಕಪ್ ಮುಂದಿನ ಟಾರ್ಗೆಟ್?
Advertisement
Advertisement
2024 ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಕೊಹ್ಲಿ 76 ರನ್(59 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಸಿದ್ದರು. ಈ ಅತ್ಯುತ್ತ ಮ ಆಟಕ್ಕೆ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇದನ್ನೂ ಓದಿ: ಚಾಂಪಿಯನ್ ಭಾರತಕ್ಕೆ ಎಷ್ಟು ಕೋಟಿ ಬಹುಮಾನ? ನ್ಯೂಜಿಲೆಂಡ್‌ಗೆ ಎಷ್ಟು?
Advertisement
ಇಂದು ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೊಹ್ಲಿ 1 ರನ್ ಗಳಿಸಿ ಔಟಾದರು. ಹೀಗಿದ್ದರೂ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 84 ರನ್ ಹೊಡೆದರೆ, ಪಾಕಿಸ್ತಾನದ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. ಈ ಎರಡೂ ಪಂದ್ಯದಗಳಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.
ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಯನ್ನು ಕೊಹ್ಲಿ ಗೆದ್ದರೆ ರೋಹಿತ್ ನಾಯಕತ್ವದಲ್ಲಿ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ.