ಮುಂಬೈ: ಜಾತ್ರೆಯೊಂದರಲ್ಲಿ ಕೇಂದ್ರ ಸಚಿವರೊಬ್ಬರ ಮಗಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಲ್ಗಾಂವ್ ಜಿಲ್ಲೆಯ ಜಾತ್ರೆಯಲ್ಲಿ ತನ್ನ ಅಪ್ರಾಪ್ತ ಮಗಳು ಕಿರುಕುಳಕ್ಕೊಳಗಾದ ನಂತರ ಯೂನಿಯನ್ ಕ್ಯಾಬಿನೆಟ್‌ನ ಮಂತ್ರಿಯೊಬ್ಬರು ಮಹಾರಾಷ್ಟ್ರದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
Advertisement
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆಗಳ ರಾಜ್ಯ ಖಾತೆ ಸಚಿವೆ, ಬಿಜೆಪಿ ನಾಯಕಿ ರಾಕ್ಷಾ ಖಡ್ಸೆ ಅವರು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಜೊತೆ ತೆರಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
Advertisement
ಶಿವರಾತ್ರಿಯ ಸಂದರ್ಭದಲ್ಲಿ ಕೋಥಾಲಿಯಲ್ಲಿ ಪ್ರತಿವರ್ಷ ಯಾತ್ರೆಯನ್ನು ಆಯೋಜಿಸಲಾಗುತ್ತದೆ. ನನ್ನ ಮಗಳು ನಿನ್ನೆ ಹಿಂದಿನ ದಿನ ಈ ಜಾತ್ರೆಗೆ ಹೋಗಿದ್ದಳು. ಈ ವೇಳೆ ಅವಳಿಗೆ ಕೆಲ ಹುಡುಗರು ಕಿರುಕುಳ ನೀಡಿದ್ದಾರೆ. ದೂರು ಸಲ್ಲಿಸಲು ನಾನು ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದು ಖಡ್ಸೆ ತಿಳಿಸಿದ್ದಾರೆ.
Advertisement
ನಾನು ನ್ಯಾಯ ಕೇಳುವ ತಾಯಿಯಾಗಿ ಬಂದಿದ್ದೇನೆಯೇ ಹೊರತು ಕೇಂದ್ರ ಸಚಿವರಾಗಿ ಮತ್ತು ಸಂಸದಳಾಗಿ ಬಂದಿಲ್ಲ ಎಂದು ಹೇಳಿದ್ದಾರೆ.
Advertisement
ಮುಕ್ತೈನಗರ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಶಾನತ್ ಪಿಂಗ್ಡೆ ಪ್ರತಿಕ್ರಿಯಿಸಿ, ಆರೋಪಿ ಹಲವಾರು ಹುಡುಗಿಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಅಂಗರಕ್ಷಕರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಏಳು ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.