ಹೈದರಾಬಾದ್: ಜ್ಞಾಪಕ ಶಕ್ತಿ ಮೂಲದ ಹೈದರಾಬಾದ್‍ನ 1 ವರ್ಷ 9 ತಿಂಗಳ ಪೋರ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದಿದ್ದಾನೆ.
ಹೈದರಾಬಾದ್‍ನ ಆದಿತ್ ವಿಶ್ವನಾಥ ಗೌರಿ ಶೆಟ್ಟಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ತೆಲುಗು ಬುಕ್ ಆಫ್ ರೆಕಾರ್ಡ್ಸ್ ಮತ್ತು ಸ್ಮರಣ ಶಕ್ತಿಗಾಗಿ ಮತ್ತೆರಡು ದಾಖಲೆಗಳನ್ನು ನಿರ್ಮಿಸಿದ್ದಾನೆ. ವರ್ಣಮಾಲೆ, ಚಿತ್ರಾತ್ಮಕ ವಸ್ತುಗಳು, ಲೋಗೋ, ಧ್ವಜ, ಹಣ್ಣು, ಪ್ರಾಣಿಗಳನ್ನು ಪುಟ್ಟ ಪೋರ ಗುರುತಿಸುವುದರೊಂದಿಗೆ ದಾಖಲೆ ಬರೆದಿದ್ದಾನೆ. ಈ ಮೂಲಕ ಸಣ್ಣ ವಯಸ್ಸಿನಲ್ಲೇ ತಮ್ಮ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದಾನೆ.
Advertisement
Advertisement
ಈ ಕುರಿತು ಮಾಹಿತಿ ನೀಡಿರುವ ತಾಯಿ ಸ್ನೇಹಿತಾ ಅವರು, ಆದಿತ್ ಕೇವಲ ಸ್ಥಳೀಯ ಅಂಶಗಳನಷ್ಟೇ ಅಲ್ಲದೇ ಜಾಗತಿಕ ಅಂಶಗಳನ್ನು ನೆನಪಿಟ್ಟುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. ಆದಿತ್ಯ ವಯಸ್ಸಿನ ಮಕ್ಕಳು ನರ್ಸರಿ ಹಾಡು ಕಲಿಯಲು ಪ್ರಯತ್ನಿಸುತ್ತಾರೆ. ಆದರೆ ಆದಿತ್ ಬಣ್ಣ, ಪ್ರಾಣಿ, ಧ್ವಜ, ಹಣ್ಣು, ಆಕೃತಿ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳು, ದೇವತೆಗಳು, ಕಾರಿನ ಲೋಗೋ, ವರ್ಣಮಾಲೆ, ಪ್ರಾಣಿಗಳು, ದೇಹದ ಭಾಗಗಳು, ವೈವಿಧ್ಯಮಯ ಚಿತ್ರಗಳನ್ನು ಗುರುತಿಸಬಲ್ಲ ಎಂದು ತಿಳಿಸಿದ್ದಾರೆ.
Advertisement
Aadith Vishwanath Gourishetty of #Hyderabad, #Telangana is #appreciated for #identifying 15 #carlogos, 5 #colours, 12 #domesticanimals, 2 #wildanimals, 12 #professions etc at the young age of 1 #year and 9 #months.
Read More At: https://t.co/cra69g4xCj pic.twitter.com/9adUdVdCf4
— India Book of Records (@indiabookrecord) September 4, 2020
Advertisement
ನಾವು ಮೊದಲು ಆದಿತ್ ಸಾಮರ್ಥ್ಯವನ್ನು ಪರೀಕ್ಷಿಸಲು ಭಾರತದ ಧ್ವಜ ಚಿತ್ರವನ್ನು ತೋರಿಸಿದ್ದೇವು. ಸ್ವಾತಂತ್ರ್ಯ ದಿನಾವಣೆಯ ವೇಳೆ ಮೋದಿ ಭಾಷಣ ಮಾಡುತ್ತಿದ್ದ ಆದಿತ್ ಧ್ವಜಕ್ಕೆ ನಮಸ್ಕಾರ ಮಾಡುತ್ತಿದ್ದ. ಒಮ್ಮೆ ಧ್ವಜ ನೋಡಿ ಬೇಗನೆ ಅರಿತುಕೊಳ್ಳಲು ಸಾಧ್ಯ ಎಂದು ಆಗ ನಮಗೆ ತಿಳಿಯಿತು. ಆ ಬಳಿಕ ಬೇರೆ ಬೇರೆ ದೇಶಗಳ ಧ್ವಜಗಳನ್ನು ಆತನಿಗೆ ಪರಿಚಯಿಸಲಾಯಿತು. ಆದಿತ್ ಕಾರ್ಯ ನೆನಪು ಈಗಿನ ವಯಸ್ಕರಿಗೂ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿದೆ.
ಮಗುವಿನ ಸಾಧನೆ ಕುರಿತು ಪ್ರತಿಕ್ರಿಯೆ ನೀಡಿರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ, ಆದಿತ್ ವಸ್ತುಗಳನ್ನು ಗುರುತಿಸಲು ತೀಕ್ಷ್ಣವಾದ ಸ್ಮರಣೆ ಹೊಂದಿರುವ ಅಸಾಧಾರಣ ಮಗು. ಜೊತೆಗೆ ದೇಶಗಳ ಧ್ವಜ, ಕಾರಿನ ಲೋಗೋ, ಚಿತ್ರಗಳು, ವಾಹನ ನಕ್ಷೆ ಸೇರಿದಂತೆ ವರ್ಣಮಾಲೆಗಳನ್ನು 1 ವರ್ಷ 9 ತಿಂಗಳ ವಯಸ್ಸಿನಲ್ಲಿ ಗುರುತಿಸುತ್ತಾನೆ ಎಂದು ತಿಳಿಸಿದೆ.
Telangana: One year & 9 months old Aadith Vishwanath Gourishetty of Hyderabad makes it to World Book of Record & four other record books for having a sharp memory. His father says, “He can recognise alphabets, pictorial objects, logos, flags, fruits, animals etc.” (07.10.2020) pic.twitter.com/Lg4ozq9UWd
— ANI (@ANI) October 7, 2020