– ಯಾರದ್ದೋ ಬೆವರಿನ ದುಡಿಮೆ, ಮತ್ಯಾರಿಗೋ ಹಣ
ಚಾಮರಾಜನಗರ: ಪಬ್ಲಿಕ್ ಹೀರೋ ಪರಿಸರ ಪ್ರೇಮಿ ವೆಂಕಟೇಶ್ ನೆಟ್ಟ ಗಿಡಗಳಿಗೆ 1.87 ಲಕ್ಷ ರೂ. ಮನರೇಗಾ ಯೊಜನೆಯ ಬಿಲ್ ಮಾಡಿ ಅಧಿಕಾರಿಗಳು ಬಂಡವಾಳ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಪರಿಸರ ಪ್ರೇಮಿ ವೆಂಕಟೇಶ್ ಅವರು ಈಗಾಗಲೇ ಜಿಲ್ಲೆಯಾದ್ಯಂತ 10 ಸಾವಿರಕ್ಕೂ ಹೆಚ್ಚು ಗಿಡ (Tree) ನೆಟ್ಟಿದ್ದಾರೆ. ಎರಡು ವರ್ಷದ ಹಿಂದೆ ಚಾಮರಾಜನಗರ (Chamarajanagara) ಹೊರ ವಲಯದ ಬೇಡರಪುರ ಬಳಿಯ ಚಾಮರಾಜನಗರ ವಿಶ್ವವಿದ್ಯಾಲಯದ ಬಳಿಯ ರಸ್ತೆ ಬದಿ ಹಾಗೂ ಆವರಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿ ಪೋಷಣೆ ಮಾಡಿದ್ದಾರೆ. ಇದನ್ನು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು 2024-25 ರ ಸಾಲಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಎಂದು ತೋರಿಸಿ 1.87 ಲಕ್ಷ ರೂ ಎಂದು ದಾಖಲಿಸಿ ಮನರೇಗಾ ಯೋಜನೆಯನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಇದನ್ನೂ ಓದಿ: 6 ಲಕ್ಷ ಸಾಲ ಪಡೆದು ಸಾವಿರ ಮರಗಳನ್ನು ಬೆಳೆಸಿರುವ ವೆಂಕಟೇಶ್ ಇಂದಿನ ಪಬ್ಲಿಕ್ ಹೀರೋ
ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ ವಾಸ್ತವವಾಗಿ ನಾನು ಗಿಡ ನೆಟ್ಟಿದ್ದೇನೆ. ಆದರೆ ಅರಣ್ಯ ಇಲಾಖೆ ಇದಕ್ಕೆ ಬಿಲ್ ಮಾಡಿಕೊಂಡಿದೆ. ಯಾರದೋ ಬೆವರಿನ ದುಡಿಮೆ, ಮತ್ಯಾರಿಗೋ ಹಣ ಅಂದತಾಗಿದೆ. ಗಿಡ ನೆಡದೆ ಅಧಿಕಾರಿಗಳು ಬಿಲ್ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‍ಗೆ ಹಾಜರಾಗದೇ ಕಳ್ಳಾಟ – ಗೋವಾದಲ್ಲಿ ಲಾಯರ್ ಜಗದೀಶ್ ಅರೆಸ್ಟ್
ಅಧಿಕಾರಿಗಳು ಮನರೇಗಾ ಯೋಜನೆಯಡಿ ಗಿಡಗಳನ್ನು ನೆಟ್ಟಿದ್ದೇವೆ ಅಂತಿದ್ದಾರೆ. ಆ ಯೋಜನೆಯ ನಾಮಫಲಕದಲ್ಲಿ ಎಷ್ಟು ಗುಂಡಿ ತೆಗೆಯಲಾಗಿದೆ? ಎಷ್ಟು ಗಿಡಗಳನ್ನು ನೆಡಲಾಗಿದೆ? ಎಷ್ಟು ಕಾರ್ಮಿಕರನ್ನು ಬಳಸಲಾಗಿದೆ ಎನ್ನುವುದರ ವಿವರಗಳನ್ನು ಎಲ್ಲೂ ಬರೆದಿಲ್ಲ. 187 ಗಿಡಗಳನ್ನು ನೆಟ್ಟರೆ 1.87 ಲಕ್ಷ ರೂ. ಖರ್ಚಾಗುತ್ತಾ ಅನ್ನೋ ಪ್ರಶ್ನೆ ಕೂಡ ಉದ್ಭವಿಸುತ್ತದೆ. ವೆಂಕಟೇಶ್ ಗಿಡ ನೆಟ್ಟಿರುವುದು ಬಿಟ್ಟರೆ ಬೇರೆ ಯಾರೂ ಕೂಡ ಈ ಸ್ಥಳದಲ್ಲಿ ಗಿಡ ನೆಟ್ಟಿಲ್ಲ. ಇದ್ದರೂ ಕೂಡ ಬೆರಳೆಣಿಕೆಯಷ್ಟು ಗಿಡಗಳಿವೆ. ಅಧಿಕಾರಿಗಳ ಪ್ರಕಾರವೇ 187 ಗಿಡ ನೆಡಲು 1.87 ಲಕ್ಷ ರೂ. ಬೇಕಾ ಅನ್ನೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: Channapatna By Election | ದೋಸ್ತಿಗಳ ಮಧ್ಯೆ 3 ಒಪ್ಪಿತ ಸೂತ್ರ? – ದೆಹಲಿ ಸಭೆಯಲ್ಲಿ ಏನಾಯ್ತು?
ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಗಿಡ ನೆಡಲೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರಂತೆ 180 ಗಿಡ ನೆಟ್ಟಿದ್ದಾರೆ ಅಂತಾ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇವೆ. ನಂತರ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಮುಗ್ಗಟ್ಟು – 150 ಸಿಬ್ಬಂದಿಗೆ ಮೂರು ತಿಂಗಳ ಕಾಲ ರಜೆ ನೀಡಿದ ಸ್ಪೈಸ್ ಜೆಟ್