ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮುಜರಾಯಿ ಇಲಾಖೆಯಲ್ಲಿನ (Muzurai Department) ಕೋಟ್ಯಾಂತರ ರೂಪಾಯಿ ಲೂಟಿ ನಡೆದಿರುವುದು ಬೆಳಕಿಗೆ ಬಂದಿದೆ.
ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ಸೇರಬೇಕಾದ 1,87,86,561 ರೂ. ಹಣ ಲೂಟಿಯಾಗಿದೆ. ಲಿಂಗಸುಗೂರು (Lingasuguru) ಕೆನರಾ ಬ್ಯಾಂಕ್ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಸರ್ಕಾರದ ಹಣವನ್ನು ಅಧಿಕಾರಿಗಳು ಕುಟುಂಬಸ್ಥರು ಹಾಗೂ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.ಇದನ್ನೂ ಓದಿ: ಮುಡಾ ಕೇಸ್, ಸಿಎಂಗೆ ಕ್ಲೀನ್ ಚಿಟ್ – 11,200 ಪುಟಗಳ ತನಿಖಾ ವರದಿ ಸಲ್ಲಿಕೆ
Advertisement
Advertisement
ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮುಜರಾಯಿ ಖಾತೆಯ ಹಣ ಲಪಟಾಯಿಸಿದ್ದು, ಕಚೇರಿಯ ಐವರು ಅಧಿಕಾರಿಗಳಿಂದ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ದ್ವಿತೀಯ ದರ್ಜೆ ಸಹಾಯಕನ ಮೇಲೆ ಆರೋಪ ಹೊರಿಸಿ ಕೈ ತೊಳೆದುಕೊಳ್ಳಲು ಸಂಚು ನಡೆದಿಸಿದ್ದರು ಎನ್ನಲಾಗಿದೆ. ಎಸ್‌ಡಿಎ ಯಲ್ಲಪ್ಪನಿಂದ ತನ್ನ ಪತ್ನಿ, ಮಗ, ಮಗಳು, ಟೆಕ್ಸಟೈಲ್ ಹಾಗೂ ಕಿರಾಣಿ ಅಂಗಡಿಗಳಿಗೆ ಹಣ ವರ್ಗಾವಣೆಯಾಗಿದೆ.
Advertisement
ಸದ್ಯ ಹಗರಣ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಲಿಂಗಸುಗೂರು ತಹಶೀಲ್ದಾರ್ ಶಂಶಾಲಂ ಅವರು ಎಸ್‌ಡಿಎ ಯಲ್ಲಪ್ಪ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಮದರಸಾದಲ್ಲಿ ಪ್ರಾಂಶುಪಾಲೆಯ ತಮ್ಮನಿಂದ ಬಾಲಕಿಯರ ಮೇಲೆ ಹಲ್ಲೆ