ಜೈಪುರ: ಬರೋಬ್ಬರಿ 1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡೀಸೆಲ್ ದರೋಡೆಯಿಂದ 1.45 ಕೋಟಿ ರೂ. ನಷ್ಟವಾಗಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಾದ ಕಾಲು ಖಾನ್ (50), ವಿಜೇಂದ್ರ ಮೀನಾ (25) ಹಾಗೂ ರಾಜು ಕುಮಾವತ್ (35) ಪೆಟ್ರೋಲ್ ಪಂಪ್ ಹಾಗೂ ರೈಲ್ವೆಗಳಿಗೆ ತೈಲ ಸಾಗಿಸುವ ಟ್ರಂಕ್‍ಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದರು. ಇದರ ಬಗ್ಗೆ ಪೊಲೀಸರು ಹಲವು ಬಾರಿ ದೂರುಗಳನ್ನು ದಾಖಲಿಸಿಕೊಂಡಿದ್ದು, ಇದೀಗ ಕಳ್ಳತನದ ಗ್ಯಾಂಗ್‍ನಿಂದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಚ್ಚಾ ಬದಾಮ್ ಹಾಡಿ ಟ್ರೋಲಾದ ರಾನು ಮಂಡಲ್
Advertisement
Advertisement
ಡೀಸೆಲ್ ದರೋಡೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಹೊಟೇಲ್‍ನಿಂದ ಟ್ಯಾಂಕರ್‌ವೊಂದರ ಡೀಸೆಲ್ ಕದಿಯುತ್ತಿದ್ದ ಆರೋಪಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಆರೋಪಿ ಕದ್ದಿರುವ 1,700 ಲೀಟರ್ ಡೀಸೆಲ್, ಎರಡು ವಾಹನ ಹಾಗೂ ಅನೇಕ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವಕನ ದಾರುಣ ಅಂತ್ಯ!
Advertisement
ಒಬ್ಬ ಆರೋಪಿಯ ಬಂಧನದ ಬಳಿಕ ಪೊಲೀಸರು ತನಿಖೆ ತೀವ್ರಗೊಳಿಸಿ ಇನ್ನಿಬ್ಬರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.