ಶ್ರೀನಗರ: ಪಾಕಿಸ್ತಾನ (Pakistan) ಮೂಲದ ಮೂವರು ಭಯೋತ್ಪಾದಕರಿಗೆ ಸೇರಿದ 28 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಒಟ್ಟು 1.8 ಎಕ್ರೆ ಭೂಮಿಯನ್ನು ಪೂಂಚ್ (Poonch) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೂಂಚ್ ಜಿಲ್ಲೆಯ ಕಿರ್ನಿ ಗ್ರಾಮದ ನಜಾಬ್ ದಿನ್, ಮೊಹಮ್ಮದ್ ಲತೀಫ್ ಮತ್ತು ಕಸ್ಬಾದ ಮೊಹಮ್ಮದ್ ಬಶೀರ್ ಅಲಿಯಾಸ್ ಟಿಕ್ಕಾ ಖಾನ್‌ಗೆ ಈ ಭೂಮಿ ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೊಯ್ಲಿ ಹೇಳಿಕೆಗೆ ಕಾಂಗ್ರೆಸ್ ಸಚಿವರ ರಕ್ಷಣಾತ್ಮಕ ಹೇಳಿಕೆ – ಹೈಕಮಾಂಡ್ ಕ್ರಮ ಕೈಗೊಳ್ಳುತ್ತೆ: ಎಂಬಿಪಿ, ಲಾಡ್
Advertisement
ಈ ಮೂವರು ಭಯೋತ್ಪಾದಕರು ಪಾಕಿಸ್ತಾನಕ್ಕೆ ಪಲಾಯನಗೈದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ, ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಕಾರ್ಯದಲ್ಲಿ ಮೂವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದನ್ನೂ ಓದಿ: ಚಿತ್ರರಂಗ ಗೋಕಾಕ್ ಚಳವಳಿ ಮಾಡಿ ಸರ್ಕಾರವನ್ನೇ ಬೀಳಿಸಿತ್ತು: ಸಾರಾ ಗೋವಿಂದು ಎಚ್ಚರಿಕೆ
Advertisement
Advertisement
ಕಂದಾಯ ಅಧಿಕಾರಿಗಳ ಜೊತೆ ಪೊಲೀಸರು ಭಯೋತ್ಪಾದಕರ ಜಾಗವನ್ನು ಜಪ್ತಿ ಮಾಡಿದ್ದಾರೆ ಎಂದು ಪೂಂಚ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಫ್ಕೇತ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ನಾವು ಫಿಲ್ಟರ್ ಮಾಡ್ತಿಲ್ಲ, ಎಲ್ಲರಿಗೂ ಹಣ ಸಿಗುತ್ತೆ: ಲಕ್ಷ್ಮಿ ಹೆಬ್ಬಾಳ್ಕರ್