ಕೊಪ್ಪಳ/ ರಾಯಚೂರು: ಭರ್ತಿಯಾಗಿರುವ ತುಂಗಭದ್ರಾ ಜಲಾಶಯದಿಂದ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ರೈತರ ಜಮೀನಿಗೆ ನೀರು ನುಗ್ಗಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದು, ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಬೆಳೆ ಹಾನಿಯಾಗಿದೆ. ನದಿ ಅಕ್ಕ-ಪಕ್ಕಇರೋ ಜಮೀನುಗಳಿಗೆ ನುಗ್ಗಿದರಿಂದ ನೀರುನಲ್ಲಿ ಭತ್ತದ ಸಸಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಅಪಾಯ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿರುವುದರಿಂದ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿರುವ ಐತಿಹಾಸಿಕ ಹೊಳೆ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಇದನ್ನೂ ಓದಿ: ನಟಿ ಸುಶ್ಮಿತಾ ಸೇನ್ ಜೊತೆಗೆ ಲಲಿತ್ ಮೋದಿ ಲವ್ವಿ-ಡವ್ವಿ
Advertisement
ರಾಯಚೂರಿನ ಬಿಚ್ಚಾಲಿಯಲ್ಲಿರುವ ಗುರು ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದ ಜಪದ ಕಟ್ಟೆ, ರಾಯರ ವೃಂದಾವನ ಜಲಾವೃತವಾಗಿದೆ.
Advertisement
ಮಲೆನಾಡಿನಲ್ಲಿ ಹುಟ್ಟಿ ಆಂಧ್ರಪ್ರದೇಶ ಮಂತ್ರಾಲಯದ ನಂತರ ಕೃಷ್ಣಾ ನದಿಗೆ ಸೇರುವ ತುಂಗಭದ್ರಾ ನದಿ ಯಾವಾಗಲೂ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಭಾಗದ ಜೀವನಾಡಿ. ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯೂ ಈಗ ಮೈದುಂಬಿ ಹರಿಯುತ್ತಿದೆ. ತುಂಗಭದ್ರಾ ನದಿಗೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಹಾಗೂ ಹೊಸಪೇಟೆ ಮಧ್ಯೆ ಜಲಾಶಯ ನಿರ್ಮಿಸಲಾಗಿದೆ.
ಭರ್ತಿಯಾಗಿರುವ ಜಲಾಶಯಕ್ಕೆ ವಿಜಯನಗರ ಶಾಸಕ ಹಾಗೂ ಕೊಪ್ಪಳ ಉಸ್ತುವಾರಿ ಸಚಿವ ಆನಂದ್ ಸಿಂಗ್ ಗುರುವಾರ ಬಾಗಿನ ಅರ್ಪಿಸಿದ್ದರು. 105.788 ಟಿಎಂಸಿ ಸಾಮರ್ಥ್ಯವನ್ನು ಡ್ಯಾಂ ಹೊಂದಿದ್ದುಎಲ್ಲಾ 33 ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಬಿಡಲಾಗಿದೆ.