ಶಿವಮೊಗ್ಗ : ಹಣಕ್ಕಾಗಿ 15 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಸಿದ್ಧಗೊಂಡಿದ್ದ ಜಾಲವೊಂದನ್ನು ಬಂಧಿಸುವಲ್ಲಿ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಟಿಪ್ಪುನಗರದ ನಿವಾಸದ ಮೇಲೆ ದಾಳಿ ನಡೆಸಿದ್ದರು. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ತನ್ನ ನಿವಾಸದಲ್ಲಿ ಸ್ಥಳೀಯ ಮಹಿಳೆಯ ಸಹಾಯದೊಂದಿಗೆ 15 ದಿನಗಳ ಮಗುವೊಂದನ್ನು ಮಾರಾಟ ಮಾಡಲು ಸಿದ್ಧವಾಗಿದ್ದಳು. ಈ ವೇಳೆ ಮಹಿಳೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: 20 ಸಾವಿರ ರೂ.ಗೆ ಮೂರು ದಿನದ ಹೆಣ್ಣು ಮಗು ಮಾರಾಟ-ಆರೋಪಿಗಳ ಬಂಧನ
Advertisement
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೈಲಾ, ಸುಮಾ, ತುಳಸಿ ಹಾಗೂ ಷಣ್ಮುಖ ಎಂಬ ನಾಲ್ವರನ್ನ ಬಂಧಿಸಲಾಗಿದೆ. ಟಿಪ್ಪುನಗರದ ನಿವಾಸವೊಂದರಲ್ಲಿ ಈ ಮಹಿಳೆಯರು 15 ದಿನದ ಗಂಡು ಮಗುವನ್ನ ಮಾರಲು ಸಜ್ಜಾಗಿದ್ದರು. ಈ ಮಗು ಸುಮಾಳ ಸಂಬಂಧಿಕರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. 1 ಲಕ್ಷದ 50 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಲು ಮಾತುಕತೆ ನಡೆದಿದ್ದು, ಓರ್ವ ಖರೀದಿ ಮಾಡಲು ಸಹ ಸಿದ್ಧವಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!
Advertisement
ಬಡತನದ ಕಾರಣದಿಂದಾಗಿ ಸಾಕಲು ಆಗದೇ ಮಾರಾಟಕ್ಕೆ ಮುಂದಾಗಿರುವುದಾಗಿ ವಿಚಾರಣೆ ವೇಳೆ ಮಗು ಕುಟುಂಬಸ್ಥರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಹಿಂದೆ ಸಹ ಇದೇ ರೀತಿ ಶೈಲಾ ನೇತೃತ್ವದಲ್ಲಿ ಎರಡು ಮಕ್ಕಳ ಮಾರಾಟ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಸದ್ಯ ನಾಲ್ವರನ್ನು ಬಂಧಿಸಿರುವ ಪೊಲೀಸರು ಮೂವರು ಮಹಿಳೆಯರು ಹಾಗೂ ಮಗುವನ್ನು ಸುರಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. ಪೊಲೀಸರ ತನಿಖೆಯಿಂದ ಇದರ ಹಿಂದೆ ಯಾರಿದ್ದಾರೆ. ಈ ಹಿಂದೆ ಈ ರೀತಿ ಎಷ್ಟು ಮಕ್ಕಳ ಮಾರಾಟವಾಗಿದೆ ಎಂಬ ಸತ್ಯ ಬಹಿರಂಗಗೊಳ್ಳಬೇಕಿದೆ. ಇದನ್ನೂ ಓದಿ: ಗಂಡ ಮಾರಾಟ ಮಾಡಿದ್ದ ಹೆಣ್ಣುಮಗುವನ್ನು ಹೋರಾಟ ಮಾಡಿ ವಾಪಸ್ ಪಡೆದ ದಿಟ್ಟ ಮಹಿಳೆ
Advertisement