ಕಲಬುರಗಿ: ಗರ್ಭಿಣಿಯೊಬ್ಬರು 1.36 ನಿಮಿಷದಲ್ಲಿ 400 ಮೀಟರ್ ಓಡಿದ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.
ಆಗಸ್ಟ್ 11 ರಂದು ಕಲಬುರಗಿ ನಗರದ ಡಿಆರ್ ಪರೇಡ್ ಮೈದಾನದಲ್ಲಿ ಪಿಎಸ್‍ಐ ನೇಮಕಾತಿಯ ದೈಹಿಕ ಪರೀಕ್ಷೆ ನಡೆದಿತ್ತು. ಇದರಲ್ಲಿ ಅಶ್ವಿನಿ ಸಂತೋಷ್ ಕೋರೆ(24) ಪಾಲ್ಗೊಂಡಿದ್ದರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದ ನಿವಾಸಿಯಾಗಿರುವ ಅಶ್ವಿನಿ 10 ವಾರಗಳ ಗರ್ಭಿಣಿಯಾಗಿದ್ದರೂ ಓಟದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ 1.36 ನಿಮಿಷದಲ್ಲಿ 400 ಮಿಟರ್ ಓಡುವಲ್ಲಿ ಯಶಸ್ವಿಯಾಗಿ ಇದೀಗ ಸುದ್ದಿಯಾಗಿದ್ದಾರೆ.
ಅಶ್ವಿನಿಯವರು ಪಿಎಸ್‍ಐ ಆಗಲೇಬೇಕು ಅನ್ನೋ ಹಠದಿಂದ ಓಡಿದ್ದಾರೆ. ಎರಡು ನಿಮಿಷದಲ್ಲಿ ಗುರಿ ಮುಟ್ಟಬೇಕಾಗಿತ್ತು. ಆದರೆ ನಿಗದಿತ ಸಮಯಕ್ಕೂ ಮೊದಲೇ ಓಡಿ ಗುರಿ ಮುಟ್ಟಿದ್ದಾರೆ. ಈ ಹಿಂದೆ ಎರಡು ಬಾರಿ ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಅಶ್ವಿನಿ ಹುದ್ದೆ ತಪ್ಪಿಸಿಕೊಂಡಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಇದೀಗ ಮತ್ತೆ ದೈಹಿಕ ಪರೀಕ್ಷೆ ಪಾಸಾಗಿದ್ದಾರೆ.