ಗಾಂಧೀನಗರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ (Chief Justice Of India), ಹಿರಿಯ ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಯೋವೃದ್ಧರೊಬ್ಬರಿಗೆ 1.26 ಕೋಟಿ ರೂ. ವಂಚನೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಅಹ್ಮದಾಬಾದ್ ಸೈಬರ್ ಕ್ರೈಂ ಪೊಲೀಸರು (Ahmedabad Crime Branch Police) ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಹುಸೇನ್ ಜಾವೇದ್ ಅಲಿ, ತರುಣ್ ಸಿಂಗ್ ವಘೇಲಾ, ಬ್ರಿಜೇಶ್ ಪರೇಖ್ ಮತ್ತು ಶುಭಂ ಠಾಕರ್ ಎಂದು ಗುರುತಿಸಲಾಗಿದೆ.
Advertisement
ಸೈಬರ್ ಕ್ರೈಂ ಪ್ರಕರಣದಲ್ಲಿ ಶುಭಂ ಠಾಕರ್‌ನನ್ನು ಈ ಹಿಂದೆ ಹರಿಯಾಣ ಪೊಲೀಸರು (Hariyana Police) ಬಂಧಿಸಿದ್ದರು. ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಇದನ್ನೂ ಓದಿ: ಪರಿಷತ್ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ
Advertisement
Advertisement
ಸಂತ್ರಸ್ತ ವೃದ್ಧ ವಿಡಿಯೋ ಕಾಲ್ ಸ್ವೀಕರಿಸಿದ ಕರೆಗಳು ಕಾಂಬೋಡಿಯಾದಲ್ಲಿ ಎಂದು ಪತ್ತೆಹಚ್ಚಲಾಗಿದೆ. ವರ್ಗಾವಣೆಯಾಗಿರುವ ಹಣದ ಹಲವು ಖಾತೆಗಳು ಗುಜರಾತ್‌ನಲ್ಲಿರುವುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಅ.10 ರಂದು ವೃದ್ಧನಿಗೆ ಕರೆ ಮಾಡಿದ್ದ ವಂಚಕರು, ತಾನು ಹಿರಿಯ ಪೊಲೀಸ್ ಅಧಿಕಾರಿ, ಸಿಬಿಐ ಅಧಿಕಾರಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎಂದು ಹೇಳಿಕೊಂಡಿದ್ದರು. ವೃದ್ಧನಿಗೆ ಕರೆ ಮಾಡಿ ಅವರ ಖಾತೆಯಿಂದ 2 ಕೋಟಿ ರೂ. ಹಣದ ವಹಿವಾಟು ನಡೆದಿದೆ. ಬ್ಯಾಂಕ್ ಖಾತೆಯು ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದೆ ಮತ್ತು ನೀವು ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.
ತನಿಖೆಯ ನೆಪದಲ್ಲಿ ಸಂತ್ರಸ್ತನ ಸ್ಥಿರ ಠೇವಣಿಗಳನ್ನು ಕ್ಲೋಸ್ ಮಾಡಿ, ಹಣವನ್ನು ಪರಿಶೀಲನೆಗೆ ವರ್ಗಾಯಿಸುವಂತೆ ಒತ್ತಡ ಹಾಕಿದ್ದಾರೆ. ಹಣವನ್ನು 48 ಗಂಟೆಯೊಳಗೆ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ವೃದ್ಧಮನ್ನು ನಂಬಿಸಲು ನಕಲಿ ಸುಪ್ರೀಂಕೋರ್ಟ್ ಪ್ರಮಾಣಪತ್ರವನ್ನು ತೋರಿಸಿದ್ದಾರೆ. ತಮ್ಮ ಠೇವಣಿಗಳನ್ನು ತೆಗೆದು ಹಣ ವರ್ಗಾವಣೆ ಮಾಡಿದ ಬಳಿಕ ವೃದ್ಧನಿಂದ ಆರೋಪಿಗಳು ಸಂಪರ್ಕ ಕಟ್ ಮಾಡಿಕೊಂಡಿದ್ದರು.ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್