ಲಕ್ನೋ: ಅಧಿಕಾರಕ್ಕೆ ಬಂದ 100 ದಿನದಲ್ಲಿ 68 ಸಾವಿರ ಒತ್ತುವರಿಯನ್ನು ತೆರವುಗೊಳಿಸಿ 844 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬಿಜೆಪಿ ಸರ್ಕಾರದ 100 ದಿನದ ಸಾಧನೆಯ ವಿವರವನ್ನು ಪ್ರಕಟಿಸಿದ ಅವರು, ಬಿಜೆಪಿ ಸರ್ಕಾರ ಕುಶಾಸನ(ಕೆಟ್ಟ ಆಡಳಿತ) ತೆಗೆದು ಹಾಕಿ ಸುಶಾಸನವನ್ನು(ಉತ್ತಮ ಆಡಳಿತ) ನೀಡುತ್ತಿದ್ದೇವೆ ಎಂದು ತಿಳಿಸಿದರು.
Advertisement
100 ದಿನದ ಬಳಿಕ ಮುಂದೆ 6 ತಿಂಗಳು, ವರ್ಷ, 2 ವರ್ಷ, 5 ವರ್ಷದ ಟಾರ್ಗೆಟ್ ಸಿದ್ಧಪಡಿಸಿ ಕಾರ್ಯಯೋಜನೆ ಮಾಡುತ್ತೇವೆ. ನಮ್ಮ ಸರ್ಕಾರ ಭಾಷಣಗಳನ್ನು ನಂಬುವುದಿಲ್ಲ. ನಾವು ನೀಡಿದ ಭರವಸೆಗಳನ್ನು ಈಡೇರಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ದೇವರ ಫೋಟೋವಿದ್ದ ಪೇಪರ್‌ನಲ್ಲಿ ಕೋಳಿ ಮಾಂಸ ಮಾರಾಟ – ವ್ಯಕ್ತಿ ಅರೆಸ್ಟ್
Advertisement
विधान सभा चुनाव के बाद उ.प्र. के स्थानीय प्राधिकारी विधान परिषद की 36 सीटों पर हुए चुनाव में 33 सीट भाजपा और 3 सीटें निर्दलीय प्रत्याशियों ने जीती थीं।
सपा, बसपा और कांग्रेस जीरो पर रहीं।
इतने वर्षों बाद पहली बार उत्तर प्रदेश विधान मंडल का उच्च सदन अब कांग्रेस मुक्त हो गया है।
— Yogi Adityanath (@myogiadityanath) July 4, 2022
Advertisement
ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತಾನಡಿದ ಅವರು, ಕ್ರಿಮಿನಲ್ ಮತ್ತು ಮಾಫಿಯಾ ವ್ಯಕ್ತಿಗಳು ಮಾಡಿಕೊಂಡಿದ್ದ ಒಟ್ಟು 68 ಸಾವಿರ ಅಕ್ರಮ ಒತ್ತುವರಿಯನ್ನು ತೆರವು ಮಾಡಲಾಗಿದೆ. ಮೊದಲ ಬಾರಿಗೆ 1.2 ಲಕ್ಷ ಲೌಡ್ ಸ್ಪೀಕರ್‌ಗಳನ್ನು ತೆರವು ಮಾಡಲಾಗಿದೆ ಅಥವಾ ಧ್ವನಿಯನ್ನು ಇಳಿಕೆ ಮಾಡಲಾಗಿದೆ ಎಂದು ವಿವರಿಸಿದರು.
Advertisement
ಅಜಂಪುರ, ರಾಂಪುರ ಲೋಕಸಭಾ ಉಪಚುನಾವಣೆ ಗೆಲುವು, ವಿಧಾನ ಪರಿಷತ್‌ನಲ್ಲಿ 33 ಸ್ಥಾನಗಳ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, 36ರ ಪೈಕಿ 33 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಉಳಿದ ಮೂರು ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ. ಉತ್ತರ ಪ್ರದೇಶದ ವಿಧಾನ ಪರಿಷತ್ ಸ್ಥಾಪನೆಯಾಗಿ 37 ವರ್ಷದ ಬಳಿಕ ಈಗ ಕಾಂಗ್ರೆಸ್ ಮುಕ್ತವಾಗಿದೆ ಎಂದು ತಿಳಿಸಿದರು.