– ಆಟೋದಲ್ಲಿ ಸಾಗಿಸ್ತಿದ್ದಾಗ ಸಿಕ್ಕಿಬಿದ್ರು
ಹೈದರಾಬಾದ್: ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದ್ದ ವಿದೇಶಿ ಸಿಗರೇಟನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಳಿಯಿಂದ ಸುಮಾರು 1.03 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಿದ್ದಿಯಂಬಾರ್ ಬಜಾರ್‌ನ ಸಮೀಪದಲ್ಲಿ ಆಟೋವೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಆಗ ಆಟೋದಲ್ಲಿ ವಿವಿಧ ಬ್ರಾಂಡ್‍ಗಳ ಅಕ್ರಮವಾಗಿ ಆಮದು ಮಾಡಿಕೊಂಡ ವಿದೇಶಿ ಸಿಗರೇಟ್‍ಗಳ 503 ಪೆಟ್ಟಿಗೆ ಪತ್ತೆಯಾಗಿವೆ. ತಕ್ಷಣ ಆಟೋ ಚಾಲಕನನ್ನು ಬಂಧಿಸಿ ಸಿಗರೇಟ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಆಟೋ ಚಾಲಕನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಗೋಶಮಹಲ್‍ನ ಸರ್ನಾ ಟ್ರಾನ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‍ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಪುಲ್ ರಾಂಕಾ (42), ಜಗದೀಶ್ ಕುಮಾರ್ (19), ದೂಂಗಾರ್ಚಂದ್ ಶ್ರೀ ಶ್ರೀಮಲ್ (65), ಪವನ್ ಕುಮಾರ್ ಪೆರ್ತಾನಿ (42) ಮತ್ತು ಸರ್ನಾ ಟ್ರಾನ್ಸ್ ಪೋರ್ಟ್ ನ ಡೆಲಿವರಿ ಏಜೆಂಟ್ ಎಂ.ಎ.ಹನೀಫ್ ಎಂದು ಗುರುತಿಸಲಾಗಿದೆ.
Advertisement
Advertisement
“ಆರೋಪಿಗಳು ದೆಹಲಿಯಿಂದ ಅಕ್ರಮವಾಗಿ ವಿದೇಶಿ ಸಿಗರೇಟುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಬಳಿಕ ಅದನ್ನು ಸ್ಥಳೀಯ ಪಾನ್ ಅಂಗಡಿಗಳು ಮತ್ತು ಕಿರಾನಾ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಈ ಮೂಲಕ ಅವರು ಸರ್ಕಾರಕ್ಕೆ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ತುಂಬಾ ನಷ್ಟವನ್ನುಂಟುಮಾಡುತ್ತಿದ್ದಾರೆ” ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.
ಪರಾರಿಯಾಗಿದ್ದ ಸರ್ನಾ ಸಾರಿಗೆ ಮಾಲೀಕ ರವೀಂದರ್ ಸಿಂಗ್ ಸರ್ನಾನಿಂದ ವಿದೇಶಿ ಸಿಗರೇಟನ್ನು ಸಂಗ್ರಹಿಸುತ್ತಿರುವುದಾಗಿ ಆರೋಪಿ ವಿಪುಲ್ ಪೊಲೀಸರಿಗೆ ಹೇಳಿದ್ದಾನೆ. ಸದ್ಯಕ್ಕೆ ಬೇಗಂ ಬಜಾರ್ ಪೊಲೀಸರು ಐವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Hyderabad City Police intercepted one auto trolley in Siddiamber Bazar under Shahinayathgunj Police Station limits & seized foreign cigarettes worth about Rs. 1.03 cr&arrested 5 accused for illegal import of foreign cigarettes: Commissioner of Police, Hyderabad. pic.twitter.com/ZmEVH30KvF
— ANI (@ANI) July 3, 2020