ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿಯಾಗಿರುವ ಅರವಿಂದ್ ಮತ್ತು ದಿವ್ಯಾ ಅವರನ್ನು ಸದಸ್ಯರು ಆಗಾಗ ಕಾಲೆಳೆಯುತ್ತಿರುತ್ತಾರೆ. ಅಷ್ಟೇ ಅಲ್ಲದೇ ಈ ಹಿಂದೆ ವೀಕೆಂಡ್ ಚರ್ಚೆಯಲ್ಲಿ ಸುದೀಪ್ ಅವರು, ಪರೀಕ್ಷೆ ಆದ ಬಳಿಕವೂ ಸ್ಟುಡೆಂಟ್ಸ್ ರಿವಿಷನ್ ಮಾಡೋದನ್ನು ನಾನು ನೋಡೇ ಇರಲಿಲ್ಲ ಎಂದು ಹೇಳಿ ಇಬ್ಬರನ್ನು ಕಾಲೆಳೆದಿದ್ದರು. ಈಗ ಬಿಗ್ ಮನೆಯ ಸದಸ್ಯರು ಮತ್ತೊಮ್ಮೆ ಈ ಜೋಡಿಯನ್ನು ತಮಾಷೆ ಮಾಡಿದ್ದಾರೆ.
64ನೇ ದಿನ ಮನೆಯ ಸದಸ್ಯರು ಲಿವಿಂಗ್ ಏರಿಯಾದಲ್ಲಿ ಟಾಸ್ಕ್ ನಿಯಮ ತಿಳಿಯಲು ಸೇರಿದ್ದರು. ಟಾಸ್ಕ್ ಗೂ ಮೊದಲು ಮಂಜು, ಅರವಿಂದ್, ದಿವ್ಯಾ ಉರುಡುಗ, ರಾಘು, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಅವರು ತನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಸದಸ್ಯರ ಮಾತುಗಳು ಮುಗಿದ ಬಳಿಕ ನಾಯಕರಾದ ಚಂದ್ರಚೂಡ್,”ನಾವೆಲ್ಲ ಹ್ಯೂಮನ್ ಚೈನ್ ಮಾಡಿ ಹಗ್ ಮಾಡೋಣ” ಎಂದು ಹೇಳಿದರು.
ಎಲ್ಲರೂ ಕುಳಿತ್ತಿದ್ದ ಸ್ಥಳದಿಂದ ಎದ್ದು ಹಗ್ ಮಾಡಲು ಆರಂಭಿಸಿದರು. ಎಲ್ಲರೂ ಅಪ್ಪಿಕೊಂಡಂತೆ ದಿವ್ಯಾ ಮತ್ತು ಅರವಿಂದ್ ಹಗ್ ಮಾಡಿದರು. ಇಬ್ಬರನ್ನು ನೋಡಿದ ದಿವ್ಯಾ ಎಸ್ ಮತ್ತು ಶುಭಾ ಪೂಂಜಾ,”ಓ..ಕೆ…. ಓಕೆ …. ಸಾಕು” ಎಂದು ಹೇಳಿದರೆ, ಪ್ರಶಾಂತ್ ಸಂಬರಗಿ, “ಅರ್ಧ ಗಂಟೆ ಆಯ್ತು.. ಒಂದು ಗಂಟೆ ಆಯ್ತು.. ಬಿಡಿ” ಎಂದು ಕಾಲೆಳೆದರು. ಮನೆಯ ಸದಸ್ಯರು ತಮಾಷೆ ಮಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಅರವಿಂದ್ ಗುಡ್ ಲಕ್ ಚೆನ್ನಾಗಿ ಆಡು ಎಂದು ವಿಶ್ ಮಾಡಿದ್ರೆ ದಿವ್ಯಾ ಗುಡ್ ಲಕ್ ಅಂತ ಹೇಳಿದರು.
ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರು ಬೆಳಗ್ಗೆ ಎದ್ದ ಕೂಡಲೇ ಹಗ್ ಮಾಡುತ್ತಾರೆ. ಅದರಲ್ಲೂ ದಿವ್ಯಾ ಅರವಿಂದ್ ಬಳಿ ಹೋಗಿ ಗುಡ್ ಮಾರ್ನಿಂಗ್ ವಿಶ್ ಮಾಡ್ತಾರೆ. ಈ ಹಿಂದೆ ವೈಷ್ಣವಿ ಅವರು ಹಗ್ ಮಾಡುವ ವಿಚಾರವನ್ನು ಪ್ರಸ್ತಾಪಿಸಿ ದಿವ್ಯಾ ಅವರನ್ನು ಕಾಲೆಳೆದಿದ್ದರು. ಅಷ್ಟೇ ಅಲ್ಲದೆ ಅರವಿಂದ್‍ಗೆ ನೀರು ಕುಡಿಸಲು ನಿಮಗೆ ಒಪ್ಪಿಗೆಯೇ ಎಂದು ದಿವ್ಯಾ ಅವರನ್ನು ಬಿಗ್ ಬಾಸ್ ಕೇಳಿದಾಗ ರಾಜೀವ್, ರೋಗಿ ಬಯಸಿದ್ದು ಹಾಲು, ವೈದ್ಯ ಕೊಟ್ಟದ್ದು ಹಾಲು ಎಂದು ಹೇಳಿ ಕಾಲೆಳೆದಿದ್ದರು.