ಮುಂಬೈ: ರವೀಂದ್ರ ಜಡೇಜಾ ಇಂದು ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದರೆ, ಆರ್‌ಸಿಬಿಯ ಹರ್ಷಲ್ ಪಟೇಲ್ ದುಬಾರಿ ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.
19ನೇ ಓವರ್ ಅಂತ್ಯಕ್ಕೆ ಚೆನ್ನೈ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಜಡೇಜಾ 26 ರನ್ ಗಳಿಸಿದ್ದರೆ ಧೋನಿ 2 ರನ್ ಹೊಡೆದಿದ್ದರು. ಕೊನೆಯ ಓವರ್ ಎಸೆಯಲು ಹರ್ಷಲ್ ಪಟೇಲ್ ಬಂದಿದ್ದರೆ ಜಡೇಜಾ ಸ್ಟ್ರೈಕ್‍ನಲ್ಲಿದ್ದರು.
Advertisement
Advertisement
ಮೊದಲ ಮೂರು ಎಸೆತವನ್ನು ಜಡೇಜಾ ಸಿಕ್ಸರ್‍ಗೆ ಅಟ್ಟಿದರು. ಮೂರನೇ ಎಸೆತ ನೋಬಾಲ್ ಆಗಿದ್ದ ಕಾರಣ ಫ್ರಿ ಹಿಟ್ ಸಿಕ್ಕಿತು. ಈ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರೆ 4ನೇ ಎಸೆತದಲ್ಲಿ 2 ರನ್ ಬಂತು. 5ನೇ ಎಸೆತದಲ್ಲಿ ಸಿಕ್ಸರ್ ಬಂದರೆ 6ನೇ ಎಸೆತದಲ್ಲಿ 4 ರನ್ ಬಂತು.
Advertisement
5 ಸಿಕ್ಸ್, 1 ಬೌಂಡರಿ, 2 ರನ್ ಹೊಡೆಯುವ ಮೂಲಕ ಜಡೇಜಾ 36 ರನ್ ಹೊಡೆದರೆ ಒಂದು ನೋಬಾಲ್ ಹಾಕಿದ ಕಾರಣ 37 ರನ್ ಬಂತು. ಈ ಹಿಂದೆ 2011ರಲ್ಲಿ ಕೊಚ್ಚಿನ್ ಟಸ್ಕರ್ಸ್ ತಂಡದ ಪರಮೇಶ್ವರನ್ ಆರ್‍ಸಿಬಿ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿದ್ದರು.
Advertisement
ಹರ್ಷಲ್ ಪಟೇಲ್ 4 ಓವರ್ ಎಸೆದು 3 ವಿಕೆಟ್ ಕಿತ್ತು 51 ರನ್ ನೀಡಿದರೆ ಚಹಲ್ 24 ರನ್ ನೀಡಿ 1 ವಿಕೆಟ್ ಕಿತ್ತರು. ಜಡೇಜಾ ಔಟಾಗದೇ 62 ರನ್(28 ಎಸೆತ, 4 ಬೌಂಡರಿ, 5 ಸಿಕ್ಸರ್) ಹೊಡೆದರೆ ಡು ಪ್ಲೆಸಿಸ್ 50 ರನ್(41 ಎಸೆತ, 5 ಬೌಂಡರಿ, 1 ಸಿಕ್ಸರ್, ಋತುರಾಜ್ ಗಾಯಕ್ವಾಡ್ 33 ರನ್(25 ಎಸೆತ, 4 ಬೌಂಡರಿ, 1ಸಿಕ್ಸರ್) ಹೊಡೆದು ಔಟಾದರು.